







ಬಡಗನ್ನೂರು: ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಭಾಭವನದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಸೆ. 14 ರಂದು ನಡೆಯಿತು.ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ನಡೆದು ಬಳಿಕ “ಅತಿಕಾಯ ಕಾಳಗ” ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.


ಪಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶುಭ ಹಾರೖೆಸಿ, ನೆರೆದಿರುವ ಕಲಾವಿದರನ್ನು ಸ್ವಾಗತಿಸಿದರು.



ಹಿಮ್ಮೇಳದಲ್ಲಿ ಭಾಗವತರಾಗಿ ರಚನಾ ಚಿದ್ಗಲ್, ಚೆಂಡೆ -ಮದ್ದಳೆ ಹಾಗೂ -ಚಕ್ರತಾಳ ವಾದಕರಾಗಿ ಲಕ್ಷ್ಮೀಶ ಶಗ್ರಿತ್ತಾಯ,10ನೇ ತರಗತಿ, ಆದಿತ್ಯಕೃಷ್ಣ ದ್ವಾರಕಾ,9ನೇ ತರಗತಿ, ಮತ್ತು ಸ್ವರೂಪ್ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಪಾತ್ರದಾರಿಗಳಾಗಿ,ಅತಿಕಾಯನಾಗಿ,ಗಣರಾಜ ಕುಂಬ್ಳೆ, ರಾವಣನಾಗಿ ವೆಂಕಟರಾಮ ಭಟ್ ಸುಳ್ಯ, ಲಕ್ಷ್ಮಣನಾಗಿ ಈಶ್ವರಪ್ರಸಾದ ಧರ್ಮಸ್ಥಳ,ರಾಮನಾಗಿ ಕೃಷ್ಣಮೂರ್ತಿ ಭಟ್ ಕೆಮ್ಮಾರ, ವಿಭೀಷಣನಾಗಿ ನವೀನಕೃಷ್ಣ ಎಸ್, ಉಪ್ಪಿನಂಗಡಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಅಶ್ವಿನಿ ಗೋಪಾಲಕೃಷ್ಣ ಭಟ್, ಜಿ,ಪರಮೇಶ್ವರ್ ಭಟ್, ವೆಂಕಟಕೃಷ್ಣಭಟ್ ಸಂಚಾಲಕ ವಿಘ್ನೇಶ್ ಹಿರಣ್ಯ ಮತ್ತು ಊರಿನ ಕಲಾ ಪೋಷಕರು, ವಿದ್ಯಾರ್ಥಿಗಳು ಶ್ರೀಕೃಷ್ಣ ವಿದ್ಯಾಸಂಸ್ಥೆಯ ಶಿಕ್ಷಕರು ಭಾಗವಹಿಸಿದ್ದರು.
ಉಪಾಧ್ಯಕ್ಷ ಅಮೃತ ಕೃಷ್ಣ ಭಟ್ ರವರು ಕಲಾವಿದರಿಗೆ ಶಾಲು ಹಾಕಿ ಸ್ವಾಗತಿಸಿದರು. ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕ ಗಣರಾಜ ಕುಂಬ್ಳೆ ರವರು ಕಾರ್ಯಕ್ರಮ ನಿರೂಪಿಸಿದರು.










