ನವೋದಯ ಪ್ರೌಢಶಾಲೆಯಲ್ಲಿ ಮೆನ್ಸ್ಟ್ರವಲ್ ಹೆಲ್ತ್ ಎಂಡ್ ಹೈಜೀನ್ ಅವೇರ್ನೆಸ್’ ಕಾರ್ಯಕ್ರಮ

0

ಬೆಟ್ಟಂಪಾಡಿ. ಇಲ್ಲಿನ ನವೋದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ವಿದ್ಯಾರ್ಥಿನಿಯರಿಗಾಗಿ ‘ಮೆನ್ಸ್ಟ್ರವಲ್ ಹೆಲ್ತ್ ಎಂಡ್ ಹೈಜೀನ್ ಅವೇರ್ನೆಸ್’ ಕಾರ್ಯಕ್ರಮವು ಅ. 24 ರಂದು ನಡೆಯಿತು. ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇವರು ಸಂಸ್ಥೆಗೆ ಕೊಡುಗೆಯಾಗಿ ನೀಡಿರುವ 10,000 ರೂಪಾಯಿ ಮೌಲ್ಯದ ವಯರಿಂಗ್ ಸಾಮಗ್ರಿಗಳ ನೆರವಿನೊಂದಿಗೆ ಸಂಸ್ಥೆಯಲ್ಲಿ ಅತ್ಯಾಧುನಿಕ ಶೈಲಿಯ ನ್ಯಾಪ್ಕಿನ್ ಬರ್ನಿಂಗ್ ಯುನಿಟ್ ನ್ನು ಅಳವಡಿಸಲಾಯಿತು. ಈ ಸಂದರ್ಭದಲ್ಲಿ ನವೋದಯ ವಿದ್ಯಾಸಮಿತಿಯ ಅಧ್ಯಕ್ಷ ರಾದ ಶ್ರೀ ಬಾಲಕೃಷ್ಣ ಭಟ್ ಘಾಟೆಯವರು,ವಿದ್ಯಾಸಂಸ್ಥೆಯ ಅಭಿವೃದ್ಧಿಯಲ್ಲಿ ಇಂತಹ ಕೊಡುಗೆಗಳ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು.



ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷರಾದ ಮನೋರಮ ಸೂರ್ಯರವರು ನ್ಯಾಪ್ಕಿನ್ ಬರ್ನಿಂಗ್ ಯೂನಿಟ್ ನ್ನು ಉದ್ಘಾಟಿಸಿ, ಮಾತನಾಡುತ್ತಾ,ಯಾವುದೇ ಕೊಡುಗೆಯು ಸತ್ಪಾತ್ರರಿಗೆ ತಲುಪಿದಾಗ ಮಾತ್ರ ಫಲಪ್ರದವಾಗುತ್ತದೆ ಎಂದು ತಿಳಿಸಿದರು.ಇನ್ನರ್ ವ್ಹೀಲ್ ಕ್ಲಬ್ ನ ಪೂರ್ವಾಧ್ಯಕ್ಷೆ , ಆಗಿರುವ ರಾಜೇಶ್ವರಿ ಆಚಾರ್ ರವರು ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ಪ್ಯಾಕೆಟ್ ಗಳನ್ನು ವಿತರಿಸಿದರು.



ಶ್ರೀಮತಿ ರಾಜೇಶ್ವರಿ ಬಲರಾಮ್ ಕ್ಲಬ್ ನ ನಿರ್ದೇಶಕರು,ಖಜಾಂಚಿ ಕವಿತಾ ಕೊಳತ್ತಾಯ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿ ಅನ್ನಪೂರ್ಣ ಪಶುಪತಿ ಶರ್ಮ ಇವರು ನ್ಯಾಪ್ಕಿನ್ ಬರ್ನಿಂಗ್ ಯುನಿಟ್ ನ ಬಳಕೆಯ ಬಗ್ಗೆ ಮಕ್ಕಳಿಗೆ ಸವಿವರವಾದ ಮಾಹಿತಿಯನ್ನು ನೀಡಿದರು.



ವಿದ್ಯಾರ್ಥಿನಿಯರಾದ ಶ್ರೀಜಾ,ಕೃತಿಕಾ,ಯಶ್ವಿನಿ,ಲತೀಕ್ಷ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮುಖ್ಯಗುರು ಪುಷ್ಪಾವತಿ ಎಸ್ ಇವರು ಸ್ವಾಗತಿಸಿದರು.ಗಣಿತ ಅಧ್ಯಾಪಿಕೆ ಗೌತಮಿ ಎಂ ಬಿ. ಯವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಆಂಗ್ಲ ಭಾಷಾ ಶಿಕ್ಷಕ ರಾಧಾಕೃಷ್ಣ ಕೋಡಿ ಕಾರ್ಯಕ್ರಮ ನಿರೂಪಿಸಿದರು.ಸಮಾಜ ವಿಜ್ಞಾನ ಅಧ್ಯಾಪಿಕೆ ಸುಮಂಗಲಾ ಕೆ ವಂದಿಸಿದರು. ಶೋಭಾ.ಬಿ, ಯಸ್ತಿತಾ, ನಾರಾಯಣ ಬನ್ನಿಂತಾಯ ಸಹಕರಿಸಿದರು.

LEAVE A REPLY

Please enter your comment!
Please enter your name here