ಪ್ರಧಾನಿ ನರೇಂದ್ರ ಮೋದಿಯರ ಜನ್ಮದಿನಾಚರಣೆ-ಪುಣಚ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ

0

ಪುಣಚ: ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ 76ನೇ ಜನ್ಮದಿನಾಚರಣೆ ಹಾಗೂ 25 ವರ್ಷಗಳ ಜನಸೇವೆಯ ಗೌರವಾರ್ಥವಾಗಿ ಸೇವಾ ಸಂಕಲ್ಪ ಅಭಿಯಾನದ ಮೂಲಕ ಪುಣಚ ಬಿಜೆಪಿ ವತಿಯಿಂದ ಸೆ.17ರಂದು ಇಲ್ಲಿನ ಮಹಿಮರ್ದಿನಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉತ್ತಮ ಆರೋಗ್ಯ ಹಾಗೂ ಯಶಸ್ವಿಗೆ ವಿಶೇಷ ಪ್ರಾರ್ಥನೆ ನೆರವೇರಿಸಿ ವಿಕಸಿತ ಭಾರತದ ಸಂಕಲ್ಪ ಮಾಡಲಾಯಿತು.

ಈ ಸಂದರ್ಭ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯದರ್ಶಿ ಪ್ರೀತಂ ಪೂಂಜಾ ಅಗ್ರಾಳ, ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಪುಣಚ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್ ಪ್ರಭು, ಕೇಪು ಗ್ರಾ.ಪಂ.ಮಾಜಿ ಅಧ್ಯಕ್ಷ ರಾಘವ ಮಣಿಯಾಣಿ, ಮಾಜಿ ಸದಸ್ಯ ಪುರುಷೋತ್ತಮ, ಅಳಿಕೆ ಬೂತ್ ಅಧ್ಯಕ್ಷ ರಾಧಾಕೃಷ್ಣ ರೈ, ಪುಣಚ ಗ್ರಾ.ಪಂ.ಮಾಜಿ ಸದಸ್ಯರುಗಳಾದ ಹರೀಶ್ ಪೂಜಾರಿ, ತೀರ್ಥಾನಂದ ಆಜೇರು, ಬಿಜೆಪಿ ಒ.ಬಿ.ಸಿ ಮೋರ್ಚಾದ ಮಾಜಿ ಉಪಾಧ್ಯಕ್ಷ ಗುರುವಪ್ಪ ಪೂಜಾರಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಉದಯಕುಮಾರ್ ದಂಬೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here