







ಕಾಣಿಯೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಭಗವಂತನು ಮೋದಿಯವರಿಗೆ ಉತ್ತಮ ಅರೋಗ್ಯ, ದೀರ್ಘಾಯುಷ ಹಾಗೂ ದೇಶವನ್ನು ಮುನ್ನಡೆಸಲು ಅಗತ್ಯವಿರುವ ಅಪಾರ ಶಕ್ತಿ -ಸಾಮರ್ಥ್ಯವನ್ನು ಕರುಣಿಸಲಿ, ದೇಶದ ಪ್ರಗತಿ, ಸುರಕ್ಷತೆ ಮತ್ತು ಪ್ರತಿಯೊಬ್ಬ ಪ್ರಜೆಯ ಕಲ್ಯಾಣಕ್ಕಾಗಿ ಅವರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ದೈವಿಕ ಮಾರ್ಗದರ್ಶನ ಹಾಗೂ ಆಶೀರ್ವಾದ ಸದಾ ಇರಲಿ.ವಿಶ್ವಗುರು ಭಾರತದ ಕನಸು ನನಸಗಲಿ ನವ ಭಾರತದ ನಿರ್ಮಾಣಕ್ಕಾಗಿ ಮತ್ತು ಭಾರತವನ್ನು ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿ ಮಾಡುವ ಅವರು ಕೈಗೊಂಡಿರುವ ಮಹತ್ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ. ಅಖಂಡ ಭಾರತದ ನಾಯಕತ್ವವನ್ನು ವಹಿಸಿಕೊಂಡಿರುವ ಅವರಿಗೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ದೇಶಸೇವೆ ಮಾಡುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಕಾರ್ಯದರ್ಶಿ ಗಣೇಶ್ ಉದನಡ್ಕ, ಶಕ್ತಿ ಕೇಂದ್ರ ಪ್ರಮುಖ್ ಸತ್ಯನಾರಾಯಣ ಕಲ್ಲುರಾಯ ,ಚಾರ್ವಾಕ ಬೂತ್ ಸಮಿತಿ ಅಧ್ಯಕ್ಷರಾದ ಮಾಧವ ಕೊಲ್ಪೆ, ಕಾರ್ಯದರ್ಶಿ ಲೋಕೇಶ್ ಎಣ್ಮೂರು, ಬೆಳಿಯಪ್ಪ ಗೌಡ ದೇವರತ್ತಿಮಾರು, ಜತ್ತಪ್ಪ ಗೌಡ ಗಾಳಿಬೆಟ್ಟು ಜತ್ತಪ್ಪ ಗೌಡ ಜತ್ತೋಡಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರು ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತ್ ಬೈಲಂಗಡಿ, ಪರಮೇಶ್ವರ ಅನಿಲ, ಸುಂದರ ಗೌಡ ದೇವಸ್ಯ,ರಮೇಶ್ ಉಪ್ಪಡ್ಕ, ಶೀಲಾವತಿ ಮುಗರಂಜ, ವೀಣಾ ಅಂಬುಲ, ದಿವಾಕರ ಮರಕ್ಕಡ, ಲೋಕೇಶ್ ಆತಾಜೆ, ಹಾಗೂ ಪಕ್ಷದ ಹಿರಿಯರು ಪಕ್ಷದ ಕಾರ್ಯಕರ್ತ ಬಂಧುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.












