







ಪುತ್ತೂರು: ಸವಣೂರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿರಾಗ್ ಗಾನ ಲಹರಿ ಪಡೀಲ್ ಪುತ್ತೂರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.


ಗಾಯಕರಾಗಿ, ತಂಡದ ನಾಯಕ ಸಮರ್ಥ್ ಪಡೀಲ್, ಶಿವಾನಿ ಪಡೀಲ್, ಲಿಖಿತ ಸಾಲ್ಯಾನ್ ಕರ್ನಪ್ಪಾಡಿ, ನಿರೂಪಕರಾಗಿ ಶ್ರುತಿ ನವೀನ್ ಎಸ್. ಕಾರ್ಯಕ್ರಮ ನೀಡಿದರು. ಪುರಂದರ್ ಪಡೀಲ್ ಕಾರ್ಯಕ್ರಮ ಸಂಯೋಜಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರು ಹಾಗೂ ಪದಾಧಿಕಾರಿಗಳು, ಸಮರ್ಥ್ ರವರನ್ನು ತಂಡದ ಪರವಾಗಿ ಗೌರವಿಸಿದರು.













