







ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮಾದಕ ವ್ಯಸನ ಮತ್ತು ಅತಿಯಾದ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಂಗಚಾವಡಿ ಕಲಾವಿದರು ಪುತ್ತೂರು ಇವರ ವತಿಯಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.


ಕಲಾವಿದ ಕೃಷ್ಣಪ್ಪ ಬಂಬಿಲ ಇವರ ನೇತೃತ್ವದಲ್ಲಿ ರಂಗಚಾವಡಿಯ ಸದಸ್ಯ ಕಲಾವಿದರು ಮಾದಕ ವ್ಯಸನಗಳಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಮೊಬೈಲ್ ಬಳಕೆಯಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು. ಕಲಾವಿದರಾಗಿ ಕೃಷ್ಣಪ್ಪ ಬಂಬಿಲ ಭವಾನಿಕಾಂಚನ, ಅರ್ಪಿತಾ ಚೊಕ್ಕಾಡಿ, ಪುಷ್ಪರಾಜ್ ಏನೇಕಲ್, ಸಹನಾ ನೆಕ್ಕರೆ, ಅಶೋಕ್ ಉಪ್ಪಿನಂಗಡಿ ಇವರು ಬೀದಿ ನಾಟಕದಲ್ಲಿ ಪಾತ್ರವಹಿಸಿದ್ದರು. ಶಾಲಾ ಉಪ ಪ್ರಾಂಶುಪಾಲರಾದ ನಾಗರಾಜ ಭಟ್‌ರವರು ಕೃಷ್ಣಪ್ಪ ಬಂಬಿಲರವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಚಿತ್ರಕಲಾ ಶಿಕ್ಷಕರಾದ ಜಗನ್ನಾಥ ಅರಿಯಡ್ಕರವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಪ್ರಶಾಂತ್ ಅನಂತಾಡಿ ಸ್ವಾಗತಿಸಿದರು. ಗ್ರೆಗೊರಿ ರೋನಿ ಪಾಯ್ಸ್ ವಂದಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.













