ಸವಣೂರಿನಲ್ಲಿ ವಿಶೇಷ ಬೀದಿ ನಾಟಕ

0

ಪುತ್ತೂರು : ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಡಬ ತಾಲೂಕು ಸವಣೂರು ವಲಯದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸವಣೂರು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ವಠಾರದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ವಿಶೇಷ ಬೀದಿ ನಾಟಕ ಕಾರ್ಯಕ್ರಮವು ನಡೆಯಿತು.


ಕೃಷಿ ಪತ್ತಿನ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ತಾರಾನಾಥ ಕಾಯರ್ಗ ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಲವಾರು ವರ್ಷಗಳಿಂದ ನಡೆಸುತಿದ್ದು ಜನರು ಜಾಗೃತಿ ಗೊಳ್ಳುವಂತೆ ಮಾಹಿತಿ ನೀಡಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕಿನ ಸ್ಥಾಪಕ ಅಧ್ಯಕ್ಷರಾಗಿರುವ ಕಾರ್ಯಕ್ರಮ ಮಹೇಶ್ ಕೆ ಸವನೂರು ರವರು ಕಾರ್ಯಕ್ರಮದ ಉದ್ದೇಶ ಅಗತ್ಯತೆ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು ಪ್ರಾ. ಕೃ. ಪತ್ತಿನ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಚೇತನ್ ಕೋಡಿಬೈಲು ಮುಖ್ಯಕಾರ್ಯನಿರ್ವಹಣಾಧಿಕಾರಿಯದ ಚಂದ್ರಶೇಖರ್ ಸವಣೂರು ಗ್ರಾಮಪಂಚಾಯತ್ ಕಾರ್ಯದರ್ಶಿಗಳಾದ ಶ್ರೀಮತಿ ಜಯಂತಿ ಅರೆಲ್ತಾಡಿ ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ್. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೀವಿ ಗ್ರಾಮ ಪಂಚಾಯತ್ ಹಾಗೂ ಕೃಷಿ ಪತ್ತಿನ ಸೇವಾ ಸಹಕಾರಿ ಬ್ಯಾಂಕಿನ ಸಿಬ್ಬಂದಿ ವರ್ಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಿಕ್ಷರು ಜ್ಞಾನವಿಕಾಸ ಕೇಂದ್ರದ ಹಾಗೂ ಒಕ್ಕೂಟ ದ ಸದಸ್ಯರು ಸಾರ್ವಜನಿಕ ರು ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿದರು.


ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಚೇತನ ಸ್ವಾಗತಿಸಿ ಮೇಲ್ವಿಚಾರಕರಾದ ಹೇಮಲತಾ ಧನ್ಯವಾದಗಳು ಸೇವಾ ಪ್ರತಿನಿಧಿಗಳಾದ ಅಮಿತಾ.ಮೀನಾಕ್ಷಿ.ಮನೋರಮ. ತೀರ್ಥಲತಾ. ತಾರ ಹಾಗೂ ಚಂದ್ರರೇಖಾ ಗ್ರಾಹಕ ಸೇವಾಕೇಂದ್ರದ ಸಿಬ್ಬಂದಿ ಬೃಂದಾ ಕಾರ್ಯಕ್ರಮ ಕ್ಕೆ ಸಹಕರಿಸಿದರು.


ಕಲಾಮಾಯೆ ಆರ್ಟ್ಸ್ ತಂಡ ಪಂಜ ಏನೇಕಲ್ ತಂಡ ದ ಸದಸ್ಯರಿಂದ ಸಾಮಾಜಿಕ ಜಾಲತಾನದಿಂದ ಆಗುವ ದುಷ್ಪರಿಣಾಮಗಳು ನೀರಂಗಿಸುವಿಕೆ ಪರಿಸರ ಸಂರಕ್ಷಣೆ ವಾಹನ ಚಲಾಯಿಸುವಾಗ ಗಮನಿಸಬೇಕಾದ ಸಂಚಾರ ನಿಯಮಗಳು. ಕಸ ವಿಲೇವಾರಿ ಅರೋಗ್ಯದ ರಕ್ಷಣೆ ಇತ್ಯಾದಿ ವಿಚಾರಗಳ ಬಗ್ಗೆ. ಅಭಿನಯಿಸಿದರು.

LEAVE A REPLY

Please enter your comment!
Please enter your name here