







ಪುತ್ತೂರು : ಪುಣ್ಚಪ್ಪಾಡಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ವಿನಾಯಕ ನಗರ ನೇರೋಳ್ತಡ್ಕ ಇದರ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಸೆ 14 ರಂದು ನೇರೋಳ್ತಡ್ಕ ಗೌರಿ ಸದನ ಸಭಾಂಗಣದಲ್ಲಿ ಜರಗಿತು.



ಶ್ರೀ ರಮೇಶ್ ಪುದ್ವುಣ್ಣಾಯ ಇವರ ಪೌರೋಹಿತ್ಯದೊಂದಿಗೆ ಶ್ರೀ ಗಣಪತಿ ದೇವರ ಪ್ರತಿಷ್ಠೆ, ಗಣಹೋಮ, ಮಂಗಳಾರತಿ, ಮಹಾಪೂಜೆ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಸಿದರು. ಪುಣ್ಚಪ್ಪಾಡಿ-ನೇರೋಳ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸೂರಪ್ಪ ಗೌಡ ಬದಿಯಡ್ಕರವರು ಧ್ವಜಾರೋಹಣ ನೆರವೇರಿಸಿದರು, ಬಳಿಕ ಶ್ರೀ ಕೃಷ್ಣಾರ್ಪಿತ ಭಜನಾ ಮಂಡಳಿ ಪುಣ್ಚಪ್ಪಾಡಿ, ಶ್ರೀ ಹರಿಭಜನಾ ಮಂಡಳಿ ದೇವಸ್ಯ, ಸಪ್ತಸ್ವರ ಭಜನಾ ತಂಡ ಪುಣ್ಚಪ್ಪಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಅಂಗನವಾಡಿ, ಯುಕೆಜಿ, ಎಲ್ಕೆಜಿ ಹಾಗೂ ಪುಟಾಣಿ ಮಕ್ಕಳಿಗೆ ಕೃಷ್ಣ ವೇಷದ ಸ್ಪರ್ಧೆಯನ್ನು ನಡೆಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪುಣ್ಚಪ್ಪಾಡಿ ಗ್ರಾಮದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಮತ್ತು ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು.



ಸಭಾಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀಗೌರಿ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷರಾದ ಮಹೇಶ್ ಕೆ ಸವಣೂರು ರವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಗಿರಿಶಂಕರ ಸುಲಾಯ, ಶ್ರೀ ಗೌರಿ ಗಣೇಶ ಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಇದರ ಅಧ್ಯಕ್ಷರಾದ ಸಚಿನ್ ಕುಮಾರ್ ಜೈನ್, ಜೊತೆ ಕಾರ್ಯದರ್ಶಿ ಸತೀಶ್ ಪೂಜಾರಿ ನೇರೋಳ್ತಡ್ಕ, ಕೋಶಾಧಿಕಾರಿ ಶೀನಪ್ಪ ಶೆಟ್ಟಿ ನೆಕ್ರಾಜೆ, ಟ್ರಸ್ಟಿಗಳಾದ ಬಾಲಕೃಷ್ಣ ರೈ ದೇವಸ್ಯ ಅಭ್ಯುದಯ, ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ರಾಜೇಶ್ವರಿ ಕನ್ಯಾಮಂಗಲ, ನಾಗರಾಜ ನಿಡ್ವಣ್ಣಾಯ ನೂಜಾಜೆ, ನವೀನ್ ಕುಮಾರ್ ಕೆ ನೂಜಾಜೆ, ಪುಣ್ಚಪ್ಪಾಡಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ದೇವಸ್ಯ, ಹೊಸಗದ್ಧೆ ವಿಸರ್ಜನಾ ಕಟ್ಟೆ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ತುಂಬೆತ್ತಡ್ಕ, ಉತ್ಸವ ಸಮಿತಿಯ ಉಪಾಧ್ಯಕ್ಷರಾದ ವಸಂತ ಗೌಡ ಬೆದ್ರಂಪಾಡಿ, ಕಾರ್ಯದರ್ಶಿ ಪ್ರಮೋದ್ ಬೊಳ್ಳಾಜೆ, ಜತೆಕಾರ್ಯದರ್ಶಿನಿತಿನ್ ಪೂಜಾರಿಮೂಲೆ, ಕೋಶಾಧಿಕಾರಿ ಯತೀಶ್ ಕೊಂಬಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕವಾಗಿ ಕಬಡ್ಡಿ, ಹಗ್ಗಜಗ್ಗಾಟ, ಮೊಸರು ಕುಡಿಕೆ, ಕಂಬದ ನಡಿಗೆ, ಭಕ್ತಿಗೀತೆ, ಸಂಗೀತ ಕುರ್ಚಿ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಗಿತು. ಕಾರ್ಯಕ್ರಮದಲ್ಲಿ ದಿಲೀಪ್ ಹೆಗ್ಡೆ ನೇರೋಳ್ತಡ್ಕ, ಮೋಹನ್ ದೇವಾಡಿಗ, ರಾಮಚಂದ್ರ ಕೊಳಂಬೆತ್ತಡ್ಕ, ಸಂತೋಷ್ ಕೊಳಂಬೆತ್ತಡ್ಕ, ಮೋಹಿತ್ ಕುಮಾರಮಂಗಲ, ಪ್ರಕಾಶ್ ರೈ ಸಾರಕರೆ, ಬಾಬು ಗೌಡ ಪೂಜಾರಿಮೂಲೆ, ಅಕ್ಷತ್ ಕುಮಾರ್ ತೋಟದಡ್ಕ, ಚೇತನ್ ಓಂತಿಮನೆ, ಕರುಣಾಕರ ಸಾರಕರೆ, ಜನಾರ್ಧನ ಗೌಡ ಓಂತಿಮನೆ, ಗಣೇಶ್ ಕೊಳಂಬೆತ್ತಡ್ಕ, ಆನಂದ ಕನ್ಯಾಮಂಗಲ, ಅಂಗನವಾಡಿ ಕಾರ್ಯಕರ್ತೆ ಶೇಷಮ್ಮ, ಚಂದ್ರಕಲಾ ಕಟ್ಟತ್ತಾರು, ಮಾಧವ ಗೌಡ ಬೆದ್ರಂಪಾಡಿ, ಲಿಂಗಪ್ಪ ರೈ ಚೆಂಬುತ್ತೋಡಿ, ಚೆನ್ನಪ್ಪ ಗೌಡ ಬುಡನಡ್ಕ, ಜಾನಕಿ ಕುಮಾರಮಂಗಲ, ಪ್ರಸಾದ್ ರೈ ಸಾರಕರೆ, ಸರಸ್ವತಿ ಗೋವಿಂದ ಕಾರೆತ್ತೋಡಿ, ಸರೋಜಿನಿ ಶ್ರೀಧರ ಪೂಜಾರಿ ನೇರೋಳ್ತಡ್ಕ, ಹೇಮಾಲತ ಶ್ರೀನಾಥ್ ನೇರೋಳ್ತಡ್ಕ, ಹರೀಶ್ ತೋಟದಡ್ಕ, ಪುಟ್ಟಣ್ಣ ಗೌಡ ಬದಿಯಡ್ಕ, ರಮಾನಂದ ಕಟ್ಟತ್ತಾರು, ರಾಜು ಕುಲಾಲ್ ಪುಣ್ಚಪ್ಪಾಡಿ, ಕೊರಗಪ್ಪ ಗೌಡ ಕುಮಾರಮಂಗಲ, ಮಹಾಬಲ ಶೆಟ್ಟಿ ಕೊಮ್ಮಂಡ, ತೀರ್ಥನ್ ಬೊಳ್ಳಾಜೆ, ಚರಣ್ ಓಂತಿಮನೆ, ಕೀರ್ತನ್ ಬದಿಯಡ್ಕ, ಭುವನ್ ಬದಿಯಡ್ಕ, ವೆಂಕಪ್ಪ ಗೌಡ ಓಂತಿಮನೆ,ವಿಜಯ ಕುಮಾರಮಂಗಲ, ಈಶ್ವರ ನಾಯ್ಕ ನೂಜಾಜೆ, ಗಂಗಾಧರ ಕನ್ಯಾಮಂಗಲ, ವಿನುತ್ ಬೆದ್ರಂಪಾಡಿ, ರಮೇಶ್ ಪಾಲೆತ್ತಡಿ, ಜೀವಿತ್ ಕುಮಾರಮಂಗಲ, ರಶ್ಮಿತಾ ಟಿ, ವಿದ್ಯಾಶ್ರೀ, ಧವಿತ್, ದಾಮೋದರ ಪೂಜಾರಿ ನೇರೋಳ್ತಡ್ಕ, ವೆಂಕಪ್ಪ ಗೌಡ ಕುಮಾರಮಂಗಲ ರವರುಗಳು ಸಹಕರಿಸಿದರು. ಮಧ್ಯಾಹ್ನ ಶ್ರೀ ಗಣಪತಿ ದೇವರ ಮಹಾ ಪೂಜೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮಕ್ಕೆ ಹಾವೇರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಪ್ರದೀಪ್ ಕುಮಾರ್ ಜೆ ನಾಯ್ಕ, ಕಡಬ ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ತಾರನಾಥ ಕಾಯರ್ಗ, ಉಪಾಧ್ಯಕ್ಷರಾದ ಚೇತನ್ ಕುಮಾರ್ ಕೋಡಿಬೈಲು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಅಶ್ವಿನಿ ಫಾರ್ಮ್ಸ್ನ ಮಾಲಕ ರಾಜರಾಮ್ ಪ್ರಭು, ಸವಣೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು, ತೀರ್ಥರಾಮ ಕೆಡೆಂಜಿ, ಶಿವರಾಮ ಗೌಡ ಮೆದು, ಗಂಗಾಧರ ಪೆರಿಯಡ್ಕ, ಕೀರ್ತನ್ ಕೋಡಿಬೈಲು, ಸವಣೂರು ಜಿನಬಸದಿಯ ಅರ್ಚಕರಾದ ಶ್ರೇಯಾಂಸ ಕುಮಾರ್ ಇಂದ್ರ, ಈಶ್ವರಮಂಗಲ ಮೆಸ್ಕಾಂ ಇಲಾಖೆಯ ಜೆ ಇ ರಮೇಶ್ ಕರಂಬಾರು, ಸುರೇಶ್ ರೈ ಸೂಡಿಮುಳ್ಳು, ವಿನ್ಯಾಸ್ ಬಂಟ್ರಿಯಾಲ್ ನೆಲ್ಯಾಡಿ ಮೊದಲಾದವರು ಭಾಗವಹಿಸಿದರು.
ವೈಭವದ ಶೋಭಾಯಾತ್ರೆ
ಸಂಜೆ ಶ್ರೀಗಣಪತಿ ದೇವರ ಶೋಭಾಯಾತ್ರೆಯ ಮೆರವಣಿಗೆಯು ನೇರೋಳ್ತಡ್ಕದಿಂದ ಪ್ರಾರಂಭಗೊಂಡು ಕುಮಾರಂಮಂಗಲದ ಮೂಲಕ ಸಾಗಿ ಗೌರಿ ಹೊಳೆ ಹೊಸಗದ್ಧೆಯಲ್ಲಿ ವಿಗ್ರಹ ವಿಸರ್ಜನೆ ಮಾಡಲಾಯಿತು.

ಗ್ರಾಮದ ಹಿರಿಯರು ಶ್ರದ್ಧಾ ಭಕ್ತಿಯಿಂದ ಶ್ರೀ ಸಾರ್ವಜನಿಕ ಗಣೇಶೋತ್ಸವನ್ನು ಪ್ರಾರಂಭಿಸಿ ಮೂವತ್ತೇಳು ವರ್ಷ ಕಳೆದಿದ್ದು, ಈ ವರ್ಷ 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಬಹಳ ಶ್ರದ್ಧಾ ಭಕ್ತಿಯಿಂದ ಊರ-ಪರವೂರ ಭಕ್ತಾಭಿಮಾನಿ, ಧಾನಿಗಳ ಸಹಕಾರ ಪ್ರೋತ್ಸಾಹ ಹಾಗೂ ಸಮಿತಿಯ ಸದಸ್ಯರ ಶ್ರಮದಿಂದ ಅರ್ಥಪೂರ್ಣವಾಗಿ ಸಂಪನ್ನಗೊಂಡಿದೆ.
ಮಹೇಶ್ ಕೆ ಸವಣೂರು
ಅಧ್ಯಕ್ಷರು, ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ನೇರೋಳ್ತಡ್ಕ-ಪುಣ್ಚಪ್ಪಾಡಿ










