







ಪುತ್ತೂರು: ಶೇಖಮಲೆ ಮಸೀದಿಯ ಮುಂಭಾಗದ ರಸ್ತೆಯ ಬದಿಯ ಮಣ್ಣು ಕುಸಿದು ಡಾಂಬರು ರಸ್ತೆಯ ಅಂಚಿಗೆ ಬಂದಿದ್ದು, ಅವಘಡ ಸಂಭವಿಸುವ ಮುನ್ನ ಎಚ್ಚರ ವಹಿಸಬೇಕಾದ ಅಗತ್ಯವಿದೆ.


ವಾಹನಗಳು ಸ್ವಲ್ಪ ದಾರಿ ತಪ್ಪಿದರೂ ಅನಾಹುತ ಸಂಭವಿಸುವ ಅಪಾಯವಿದೆ. ಇದು ಶಾಲಾ ಮಕ್ಕಳು ನಿತ್ಯ ಓಡಾಡುವ ಮುಖ್ಯ ದಾರಿಯಾಗಿದ್ದು, ಗುಂಡಿಯಿಂದಾಗಿ ಮಕ್ಕಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಈಗಾಗಲೇ ಹಲವು ವಾಹನಗಳು ಬಿದ್ದು ಅವಘಡಗಳು ಸಂಭವಿಸಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.



ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಚರಂಡಿಗೆ ಸ್ಲಾಬ್ ಅಳವಡಿಸಿ ಮತ್ತು ರಸ್ತೆ ಬದಿ ದುರಸ್ತಿಗೊಳಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಶೇಖಮಲೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.










