







ಪುತ್ತೂರು :ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿನಗರ ಮೆಸ್ಕಾಂ, ಸೋಂಪಾಡಿ ರಸ್ತೆ ಬದಿ ಸವಣೂರು ಗ್ರಾಮದ ಶಾಂತಿನಗರ ನಿವಾಸಿಯೊಬ್ಬರು ತ್ಯಾಜ್ಯನ್ನು ಎಸೆದಿದ್ದು ತ್ಯಾಜ್ಯ ಎಸೆದ ಅಶ್ರಫ್ ಉರ್ಸಾಗು ಎಂಬವರಿಗೆ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.


ಬಳಿಕ ತ್ಯಾಜ್ಯವನ್ನು ವಿಲೇವಾರಿ ಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಯಿತು. ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ ಗ್ರಾಮ ಪಂಚಾಯತ್‌ನ ಒಣಕಸ ಸಂಗ್ರಹ ವಾಹನದಲ್ಲಿ ಕಸವನ್ನು ನೀಡಿ ನಮ್ಮ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿಸುವಲ್ಲಿ ನಾಗರಿಕರೆಲ್ಲರೂ ಸಹಕರಿಸಬೇಕೆಂದು ಸವಣೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಗುರುವ ಅವರು ವಿನಂತಿಸಿದ್ದಾರೆ













