







ಪುತ್ತೂರು: ಶ್ರೀ ಸಿದ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಸೀಗೆಬಲ್ಲೆ ವಿಟ್ಲ ಇದರ ಆಶ್ರಯದಲ್ಲಿ ಶ್ರೀ ಗಣೇಶ ಚತುರ್ಥಿ ಅಂಗವಾಗಿ ಸೆ.20ರಂದು ಸೀಗೆಬಲ್ಲೆ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ನಡೆಯಲಿದೆ.


ಬೆಳಿಗ್ಗೆ9ರಿಂದ ಆರಂಭವಾಗುವ ಕ್ರೀಡಾಕೂಟದಲ್ಲಿ ಮಕ್ಕಳಿಗೆ ಬಕೆಟ್‌ಗೆ ಬಾಲ್ ಹಾಕುವುದು, ಕಪ್ಪೆ ಓಟ,ಬಾಲ್ ಪಾಸಿಂಗ್,ಸಂಗೀತ ಕುರ್ಚಿ,ಮಹಿಳೆಯರಿಗೆ ಲಿಂಬೆ ಚಮಚ ಓಟ,ಸಂಗೀತ ಕುರ್ಚಿ,ಬಾಲ್ ಪಾಸಿಂಗ್,ಸೂಜಿಗೆ ದಾರ ನೇಯುವುದು,ಗುಂಡು ಎಸೆತ,ಹಗ್ಗ ಜಗ್ಗಾಟ ,ಪುರುಷರಿಗೆ ಗೋಣಿಚೀಲ ಓಟ ,ಗುಂಡೆಸೆತ,ವಾಲಿಬಾಲ್, ಹಗ್ಗ ಜಗ್ಗಾಟ ನಡೆಯಲಿದೆ. ತಂಡಗಳನ್ನು ಸ್ಥಳದಲ್ಲೇ ಆಯ್ಕೆಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.













