ಬೊಳುವಾರು : ಅಪಾಯಕಾರಿ ಏರ್‌ಟೆಲ್ ಜಂಕ್ಷನ್ ಬಾಕ್ಸ್‌ಗೆ ಸುದ್ದಿ ಬೆನ್ನಲ್ಲೇ ಪರಿಹಾರ

0

ಪುತ್ತೂರು: ಬೊಳುವಾರು ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್ ಬಳಿ ರಸ್ತೆ ಅಂಚಿನಲ್ಲಿರುವ ಏರ್‌ಟೆಲ್ ಕಂಪೆನಿಯ ಜಂಕ್ಷನ್ ಬಾಕ್ಸ್ ಜಗ್ಗುತ್ತಿದ್ದು ವಾಹನ ಸವಾರರಿಗೆ ಅಪಾಯ ಉಂಟಾಗಿತ್ತು.

ಜಂಕ್ಷನ್ ಬಾಕ್ಸ್ ಜಗ್ಗುತ್ತಿರುವ ಕುರಿತು ಗೊತ್ತಿರುವ ಸವಾರರು ತಪ್ಪಿಸಿಕೊಂಡು ಹೋಗುತ್ತಿದ್ದರೆ, ಅರಿವಿಲ್ಲದವರು ಟಯರ್ ಹತ್ತಿಸಿದಾಗ ಬಾಕ್ಸ್ ಜಗ್ಗಿ ಅಪಘಾತದ ಭೀತಿ ಎದುರಾಗಿತ್ತು.

ಈ ಕುರಿತು ಸುದ್ದಿ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಸಂಬಂಧಪಟ್ಟವರು ಕೂಡಲೇ ಸ್ಥಳಕ್ಕೆ ಆಗಮಿಸಿ ಜಂಕ್ಷನ್ ಬಾಕ್ಸ್ ದುರಸ್ತಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here