ಪುತ್ತೂರು ತುಳುಕೂಟದ ವತಿಯಿಂದ ಸೆಪ್ಟೆಂಬರ್ 20ರಂದು ತುಳುವರ ಪುದ್ವರ್ ತೆನೆಹಬ್ಬ ಮತ್ತು ತುಳು ಕವಿಗೋಷ್ಠಿ

0

ಪುತ್ತೂರು: ತುಳುಕೂಟ ಪುತ್ತೂರು ಇದರ ವತಿಯಿಂದ ನಾಳೆ ಸೆಪ್ಟೆಂಬರ್ 20ರಂದು ಜಿ. ಎಲ್.ವನ್ ಮಾಲ್’ನ ಒಂದನೇ ಮಹಡಿಯಲ್ಲಿ ತುಳುವರ ತೆನೆಹಬ್ಬ ಪುದ್ವರ್ ಮತ್ತು ತುಳು ಕವಿಗೋಷ್ಠಿ ಜರಗಲಿದೆ. ಬೆಳಗ್ಗೆ 10 ಗಂಟೆಯಿಂದ ಕವಿಗೋಷ್ಠಿ ಜರಗಲಿದ್ದು ದಕ್ಷಿಣ ಕನ್ನಡ ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ವಿoಧ್ಯಾ ಎಸ್. ರೈ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಅವರು ಕವಿಗೋಷ್ಠಿಯನ್ನು ನಿರ್ವಹಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವದ ಮದ್ಯಸ್ಥ ಮನ್ಮಥ ಶೆಟ್ಟಿ ಪುತ್ತೂರು ಅವರು ತುಳುವರ ಪುದ್ವರ್ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಜಿ. ಎಲ್. ಗ್ರೂಪ್’ನ ಮಾಲಕ ಬಲರಾಮ ಆಚಾರ್ಯ, ಜನ್ ಮನ್ ಜನರಿಕ್ ಔಷಧಿಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಅನಿಲಾ ದೀಪಕ್ ಶೆಟ್ಟಿ ಮತ್ತು ಅಮಿತಾ ಆರ್ ಶೆಟ್ಟಿ ನುಳಿಯಾಲು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಧ್ಯಾಪಕ ರಮೇಶ್ ಉಳಯ ತುಳು ರಸಪ್ರಶ್ನೆ ನಡೆಸಿಕೊಡಲಿದ್ದು ನಂತರ ಹೊಸಅಕ್ಕಿ ಭೋಜನ ಇದ್ದು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದೆಂದು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಮತ್ತು ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here