ಅ.25 : ಪುತ್ತೂರು ತಾಲೂಕು ಸಾಹಿತ್ಯ ಪರಿಷತ್‌ನ ಗ್ರಾಮ ಸಾಹಿತ್ಯ ಸಂಭ್ರಮ ಸಮಾರೋಪ – ಬಾಲ ಸಾಹಿತಿಗಳ ಸಮಾವೇಶ

0

ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮಿತ್ರಂಪಾಡಿ ಜಯರಾಮ್ ರೈ ಅಬುಧಾಬಿ ಅವರ ಮಹಾಪೋಷಕತ್ವ, ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮ ಸಮಾರೋಪ ಸಮಾರಂಭ, ಬಾಲ ಸಾಹಿತಿಗಳ ಸಮಾವೇಶ ಅಕ್ಟೋಬರ್ 25ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಆವರಣದಲ್ಲಿ ನಡೆಯಲಿದೆ. ಬಾಲ ಸಾಹಿತ್ಯ ಸಮಾವೇಶದಲ್ಲಿ ನಗರಸಭಾ ವ್ಯಾಪ್ತಿಯ 33 ಶಾಲೆ, 18 ಕಾಲೇಜುಗಳು ಭಾಗವಹಿಸಲಿವೆ.

ವಿವಿಧ ಗೋಷ್ಠಿ
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಎಂ. ಮನ್ಮಥ ಆಚಾರ್ಯ ಕಡಬ, ಕಥಾಗೋಷ್ಠಿಯನ್ನು ಅಶ್ವಿಜ ಶ್ರೀಧರ್ ಬೆಳ್ಳಂಗಡಿ, ಪ್ರವಾಸ ಕಥನ ಗೋಷ್ಠಿಯನ್ನು ರಕ್ಷಿತಾ ಸುರೇಶ್ ಜೋಗಿಬೆಟ್ಟು, ನನ್ನ ನೆಚ್ಚಿನ ಶಿಕ್ಷಕ ಲೇಖನ ವಾಚನ ಗೋಷ್ಠಿಯನ್ನು ಮಾನಸ ವಿಜಯ್ ಕೈಂತಜೆ ಮತ್ತು ನನ್ನ ಅಚ್ಚುಮೆಚ್ಚಿನ ಲೇಖನ ವಾಚನ ಗೋಷ್ಠಿಯನ್ನು ಬಿಂದ್ಯಾ ಎಸ್. ರೈ ಕಡೇಶಿವಾಲಯ ವಹಿಸಲಿದ್ದಾರೆ. 16 ಮಂದಿ ಪುರಸ್ಕೃತರ ಸನ್ಮಾನ ಪತ್ರವನ್ನು 16 ಮಂದಿ ವಾಚಿಸಲಿದ್ದು, ಗೋಷ್ಠಿಗಳ ನಿರ್ವಹಣೆಯನ್ನು ಮೋಹಿತಾ ಹೊಸ್ಮಠ ಸೇರಿದಂತೆ 8 ಮಂದಿ ನಿರ್ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮ:
ಪುತ್ತೂರು ಸಾಹಿತ್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದ 10ನೇ ತರಗತಿ ವಿದ್ಯಾರ್ಥಿನಿ ಕು. ಸಾಯಿಶ್ರೀ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರಿನ ದ್ವಿತೀಯ ಬಿ.ಎ ವಿದ್ಯಾರ್ಥಿ ಜೀವನ್ ಎನ್ ಸಮಾರೋಪ ಭಾಷಣ ಮಾಡಲಿದ್ದಾರೆ.ಕಾರ್ಯಕ್ರಮವನ್ನು ಸಾಹಿತ್ಯ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಉದ್ಘಾಟಿಸಲಿದ್ದು, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ. ಖಾದರ್, ಶಾಸಕ ಅಶೋಕ್ ಕುಮಾರ್ ರೈ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಎಂ. ಮೋಹನ್ ಆಳ್ವ ಭಾಗವಹಿಸಿ ಸಾಧಕ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ದರ್ಶನ್ ಕೆ.ವಿ, ಎಸ್ಪಿ ಅನಿಲ್ ಕುಮಾರ್ ಬೂಮ ರೆಡ್ಡಿ, ಮಂಗಳೂರು ವಿವಿಯ ಕುಲಸಚಿವ ಸಂತೋಷ್ ಬಿ. ಜಗಳಸರ್, ತಹಸೀಲ್ದಾರ್ ಎಸ್.ಬಿ. ಕುಡ್ಲಗಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಡಿವೈಎಸ್ಪಿ ಪ್ರಮೋದ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ ಹಾಗೂ ಸಾಮೂಹಿಕ ಸಂಪನ್ಮೂಲ ವ್ಯಕ್ತಿಗಳಾದ ಶಶಿಕಲಾ, ದೇವಕಿ ಮತ್ತು ಪ್ರಸಾದ್ ಅವರು ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿಯಲ್ಲಿ ವಿವೇಕಾನಂದ ಶಾಲೆ ತೆಂಕಿಲದ ಅಧ್ಯಕ್ಷ ರಮೇಶ್ಚಂದ್ರ, ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ, ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಬಿ. ಐತಪ್ಪ ನಾಯ್ಕ ಮತ್ತು ಚಿಗುರೆಲೆ ಸಾಹಿತ್ಯ ಬಳಗದ ಅಧ್ಯಕ್ಷ ಚಂದ್ರಮೌಳಿ ಕಡಂದೇಲು ಅವರು ಇರಲಿದ್ದಾರೆ.

ಸಾಧಕ ಪುರಸ್ಕಾರ:
ಪುತ್ತೂರು ಸಾಹಿತ್ಯೋತ್ಸವ 2026ರಲ್ಲಿ 16 ಮಂದಿ ಸಾಧಕರಿಗೆ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಗುವುದು.ಸಾಹಿತ್ಯ ಕ್ಷೇತ್ರದಲ್ಲಿ ಸುಲೋಚನಾ ಪಿ.ಕೆ, ಸಾಹಿತ್ಯ ಪೋಷಕರಾಗಿ ಅವಿನಾಶ್ ಭಂಡಾರ್ಕರ್, ತುಳು ಲಿಪಿ ಸಾಹಿತ್ಯದಲ್ಲಿ ಅರ್ಪಣಾ ಕೊಡಂಕಿರಿ, ಸಮಾಜ ಸೇವೆಯಲ್ಲಿ ಅಬ್ದುಲ್ ರಜಾಕ್ ಬಪ್ಪಳಿಗೆ, ಚಿತ್ರಕಲೆಯಲ್ಲಿ ಪ್ರವೀಣ ವರ್ಣಕುಟೀರ, ಸಂಘಟನೆಯಲ್ಲಿ ಆಸ್ಟರ್ ಆನಂದ್, ಆಯುರ್ವೇದದಲ್ಲಿ ಡಾ. ಪ್ರದೀಪ್ ಕುಮಾರ್, ಉರಗ ಸಂರಕ್ಷಣೆಯಲ್ಲಿ ತೇಜಸ್, ಭರತನಾಟ್ಯದಲ್ಲಿ ಶಾಲಿನಿ ಆತ್ಮಭೂಷಣ್, ಕನ್ನಡ ವಿವೇಚಕ ವಿವರಣೆಯಲ್ಲಿ ಅಬ್ದುಲ್ ರಜಾಕ್ ಸಾಲ್ಮರ, ವಿಶೇಷ ಮಕ್ಕಳ ಸೇವೆಯಲ್ಲಿ ತನುಜಾ ರೋಯಿರ್, ತ್ರಿಯಾತ್ಮಕ ಕಲಾ ನಿರ್ದೇಶನದಲ್ಲಿ ಬಿ.ಕೆ. ಗಣೇಶ್ ರೈ, ಪತ್ರಿಕೋದ್ಯಮದಲ್ಲಿ ಸೃಜನ್ ಉರುಬೈಲು, ಮಕ್ಕಳ ಸಾಹಿತ್ಯ ವ್ಯಂಗ್ಯ ಚಿತ್ರ ಕಲೆಯಲ್ಲಿ ನಾರಾಯಣ ರೈ ಕುಕ್ಕುವಳ್ಳಿ ಅವರನ್ನು ಗುರುತಿಸಲಾಗಿದೆ.ಸಂಘ ಸಂಸ್ಥೆ ವಿಭಾಗದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಮತ್ತು ರಮಣಿ ಬಾಲ ಸಮಿತಿ ಶಿವನಗರ ಸಂಸ್ಥೆಗಳಿಗೆ ಪುರಸ್ಕಾರ ನೀಡಲಾಗುವುದು.

ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಐಎಎಸ್ ಬರೆಯಿರಿ, ಐಎಎಸ್-ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕುರಿತು ಐಎಎಸ್ ದರ್ಶನ ಬೆಂಗಳೂರಿನ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಅವರು ಮಾಹಿತಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here