







ಪುತ್ತೂರು: ಸುಳ್ಯ ಅಡ್ಕಾರು ವಿನೋಭಾನಗರದಲ್ಲಿ ಲಾರಿಯೊಂದು ಡಿಕ್ಕಿಯಾಗಿ ಪಾದಾಚಾರಿ ಪುತ್ತೂರಿನ ಕೊಡಿಪ್ಪಾಡಿ ಶೇವಿರೆ ನಿವಾಸಿಯೊಬ್ಬರು ಮೃತಪಟ್ಟ ಘಟನೆ ಸೆ.19ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.


ಪುತ್ತೂರು ಕೊಡಿಪ್ಪಾಡಿ ಗ್ರಾಮದ ಶೇವಿರೆ ನಿವಾಸಿ ದೀಪಕ್ ಎನ್ ಎಂಬವರು ಮೃತಪಟ್ಟವರು. ಬಂಟ್ವಾಳ ಕೆದಿಲ ನಿವಾಸಿ ಅಬ್ದುಲ್ ಲತ್ಮಿಫ್ ಎಂಬವರು ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸಿದರ ಪರಿಣಾಮ ಪಾದಾಚಾರಿಯಾದ ದೀಪಕ್ ಎನ್ ಎಂಬವರಿಗೆ ಡಿಕ್ಕಿಯಾಗಿದೆ. ಘಟನೆಯಿಂದ ದೀಪಕ್ ಅವರು ಮೃತಪಟ್ಟಿದ್ದು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












