ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಕನಕಾಭಿಯಾನ

0

ಕನಕ ಸಾಮಾಜಿಕ ನ್ಯಾಯದ ಪ್ರತಿಪಾದಕ: ಧನಂಜಯ ಕುಂಬ್ಳೆ

ಪುತ್ತೂರು : ಭಕ್ತಿಯನ್ನು ಬದುಕಿನೊಂದಿಗೆ, ಬದುಕನ್ನು ಸಾಮಾಜಿಕ ನ್ಯಾಯದ ಪ್ರಶ್ನೆಯೊಂದಿಗೆ ಜೋಡಿಸಿದ ಕವಿ ಕನಕದಾಸರು. ಅಹಂಕಾರ ನಿರಸನ ಹಾಗೂ ಸಾಮಾಜಿಕ ಸಮಾನತೆ ಕನಕದಾಸರ ಚಿಂತನೆಗಳ ಮೂಲ ಸತ್ವ ಎಂದು ಮಂಗಳೂರು ವಿವಿ ಕನಕದಾಸ ಸಂಶೋಧನಾ ಕೇಂದ್ರದ‌ ಸಂಯೋಜಕ ಡಾ|ಧನಂಜಯ ಕುಂಬ್ಖೆ ಹೇಳಿದರು.

ಸೆ.18ರಂದು ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಅಧ್ಯಯನ ಪೀಠ ಮತ್ತು ಕನಕದಾಸ ಸಂಶೋಧನಾ ಕೇಂದ್ರ ಹಾಗೂ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು, ಪಟ್ಟೆ, ಬಡಗನ್ನೂರು ಪುತ್ತೂರು ಇವರ ಸಹಯೋಗದೊಂದಿಗೆ ಪಟ್ಟೆ ಶಾಲೆಯ ಸಭಾಭವನದಲ್ಲಿ ನಡೆದʻಕನಕ ತತ್ತ್ವಚಿಂತನ ಪ್ರಚಾರೋಪನ್ಯಾಸ ಮಾಲಿಕೆಯಡಿ ʻರಾಮಧಾನ್ಯ ಚರಿತ್ರೆʼ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು  ದ್ವಾರಕ ಪ್ರತಿಷ್ಠಾನದ ಸಹ ನಿರ್ದೇಶಕಿ  ಅಶ್ವಿನಿ  ಗೋಪಾಲಕೃಷ್ಣ ನೆರವೇರಿಸಿದರು.  ಕಾರ್ಯಕ್ರಮದಲ್ಲಿ ಮೂಡುಬಿದಿರೆ ಆಳ್ವಾಸ್‌ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ  ರಾಮಪ್ರಸಾದ ಕಾಂಚೋಡು, ನಿವೃತ್ತ ಪ್ರಾಚಾರ್ಯರು, ಕಲಾವಿದರಾದ ಗಣರಾಜ ಕುಂಬ್ಳೆ, ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕ ಜಿ,ಪರಮೇಶ್ವರ್ ಭಟ್, ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ, ಪ್ರೌಢ ಶಾಲಾಮುಖ್ಯ ಗುರುಗಳಾದ  ಸುಮನಾ ಮಾತಾಜಿ, ಪ್ರಾಥಮಿಕ ಶಾಲಾ ಮುಖ್ಯಗುರು ರಾಜಗೋಪಾಲ್ ಎನ್, ಉಪಸ್ಥಿತರಿದ್ದರು.

ಶಿಕ್ಷಕ ರಾಜಗೋಪಾಲ್ ಎನ್, ಸ್ವಾಗತಿಸಿ, ಪ್ರೌಢಶಾಲಾ ಶಿಕ್ಷಕರಾದ ವಿಶ್ವನಾಥ ಬೊಳ್ಳಾಡಿ ಧನ್ಯವಾದವನ್ನಿತ್ತರು. ಜ್ಯೋತಿ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ರಾಮಧಾನ್ಯ ಚರಿತೆ ಗಮಕ ವ್ಯಾಖ್ಯಾನ:

ಗಮಕಿಗಳಾದ  ರಾಮಪ್ರಸಾದ ಕಾಂಜೋಡು, ಕಲಾವಿದರಾದ  ಗಣರಾಜ ಕುಂಬ್ಳೆ ಇವರಿಂದ ʻರಾಮಧಾನ್ಯ ಚರಿತೆʼ ಗಮಕ ವಾಚನ – ವ್ಯಾಖ್ಯಾನ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಯಿತು.

LEAVE A REPLY

Please enter your comment!
Please enter your name here