ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕೃತ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ತುಳುನಾಡಿನ ವರ್ಣನೆ

0

ಕಂಠಸಿರಿಯ ಮೂಲಕ ಗಮನ ಸೆಳೆಯುತ್ತಿರುವ ಪುತ್ತೂರಿನ ದಿವ್ಯಶ್ರೀ ರೈ ವಜ್ರದುಂಬಿ

ಪುತ್ತೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಇನ್ಸ್ಟಾಗ್ರಾಂ ಪೇಜ್‌ನಲ್ಲಿ‌ ತುಳುನಾಡನ್ನು ವರ್ಣಿಸುವ ವೀಡಿಯೋ ಸ್ಟೋರಿಗೆ ಧ್ವನಿ ನೀಡಿರುವ ಪುತ್ತೂರಿನ ದಿವ್ಯಶ್ರೀ ರೈ ವಜ್ರದುಂಬಿ ಅವರು ತನ್ನ ಕಂಠಸಿರಿಯ ಮೂಲಕ ಗಮನ ಸೆಳೆಯುತ್ತಿದ್ದಾರೆ.


ದಿವ್ಯಶ್ರೀ ರೈ ವಜ್ರದುಂಬಿ ಅವರು ಪ್ರಸ್ತುತ ಪುತ್ತೂರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂಹವನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಕರ್ನಾಟಕ ಸರಕಾರದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಘೋಷಣೆಯಾದ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ತುಳುನಾಡನ್ನು ವರ್ಣಿಸುವ ವೀಡಿಯೋ ಸ್ಟೋರಿಗೆ ದಿವ್ಯಶ್ರೀ ಧ್ವನಿ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ನಿರೂಪಕಿ ಮತ್ತು ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿರುವ ದಿವ್ಯಶ್ರೀ ಕಾರ್ಯಕ್ರಮ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 2025ರಲ್ಲಿ ಪ್ರಕಟವಾದ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಮುಖಪುಟ ರೂಪದರ್ಶಿಯಾಗಿಯೂ ಗುರುತಿಸಿಕೊಂಡಿದ್ದ ಇವರು ವಿವಿಧ ಕ್ಷೇತ್ರಗಳ ಡಾಕ್ಯುಮೆಂಟರಿ, ಸ್ಪೆಷಲ್ ಸ್ಟೋರಿ ಹಾಗೂ ಅನೇಕ ಜಾಹೀರಾತುಗಳಿಗೆ ಧ್ವನಿ ನೀಡಿ ಗಮನ ಸೆಳೆದಿದ್ದಾರೆ.


2023ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂಹವನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರಾಂಕ್ ಗಳಿಸಿದ್ದ ದಿವ್ಯಶ್ರೀ ಅರಿಯಡ್ಕ ಗ್ರಾಮದ ತ್ಯಾಗರಾಜನಗರ ನಗರ ನಿವಾಸಿ ವಿಠಲ ರೈ ಹಾಗೂ ಶಾಲಿನಿ ರೈ ದಂಪತಿಯ ಪುತ್ರಿ. ಇವರ ಈ ಸಾಧನೆಗಳಿಗೆ ಸಹೋದರಿ ಮಧುಶ್ರೀ ರೈ ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here