ಶ್ರೀ ಕಾಳಿಕಾಂಬ ಯಕ್ಷಕಲಾ ಪ್ರತಿಷ್ಠಾನದ ಸುವರ್ಣ ಸಂಭ್ರಮ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನವು ಯಕ್ಷಗಾನ ಕಲಾ ಸೇವೆಯಲ್ಲಿ ಸತತ 50 ವರ್ಷಗಳನ್ನು ಪೂರ್ಣೈಸಿದ್ದು, ಇದರಂಗವಾಗಿ ಸುವರ್ಣ ಸಂಗಮ- 2026 ಕಾರ್ಯಕ್ರಮವು ಸೆ.20 ಉಪ್ಪಿನಂಗಡಿಯ ಸಂಗಮ ಕೃಪಾ ಸಭಾಭವನದಲ್ಲಿ ನಡೆಯಿತು.


ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಯಕ್ಷಕಲಾ ಕ್ಷೇತ್ರದಲ್ಲಿ ಸುಧೀರ್ಘ ೫೦ ವರ್ಷ ಕ್ರಿಯಾಶೀಲತೆಯಿಂದ ಸಾಧನೆ ತೋರಿದ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಕಾರ್ಯ ಶ್ಲಾಘನಾರ್ಹವೆಂದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಸುವರ್ಣ ,ದಂತ ವೈದ್ಯ ಡಾ. ರಾಜಾರಾಮ ಕೆ ಬಿ, ಯಕ್ಷಗಾನ ಕಲಾ ಪೋಷಕ ಎನ್. ಉಮೇಶ್ ಶೆಣೈ , ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಸುವರ್ಣಮಹೋತ್ಸವ ಸಮಿತಿಯ ಅಧ್ಯಕ್ಷ ಡಿ. ಚಂದಪ್ಪ ಮೂಲ್ಯ ಭಾಗವಹಿಸಿದರು.


ಯಕ್ಷಗಾನ ವಿದ್ವಾಂಸ ತಾಳ್ತಜೆ ಕೃಷ್ಣ ಭಟ್ಟ ಸಂಸ್ಮರಣೆ ಕಾರ್ಯಕ್ರಮವು ಡಾ. ವಸಂತ ಕುಮಾರ ತಾಳ್ತಜೆರವರ ಅಧ್ಯಕ್ಷತೆಯಲ್ಲಿ ನಡೆದು ಗಣರಾಜ ಕುಂಬ್ಳೆಯವರು ಸಂಸ್ಮರಣಾ ಉಪನ್ಯಾಸವನ್ನು ನೀಡಿದರು. ವೇದಿಕೆಯಲ್ಲಿ ಸವಿತಾ ಪಿ.ಜಿ. ಭಟ್ ಹಾಗೂ ಲಲಿತಾ ಭಟ್ ಉಪಸ್ಥಿತರಿದ್ದು ನೆನಪಿನಂಗಳದ ನುಡಿಗಳನ್ನಾಡಿದರು.


ಕಾರ್ಯಕ್ರಮದಲ್ಲಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಬಿ. ಸುಬ್ರಹ್ಮಣ್ಯ ರಾವ್ ಬನ್ನೆಂಗಳ, ರವೀಂದ್ರ ದರ್ಬೆ, ಕೆ ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಶ್ರೀಧರ ಎಸ್.ಪಿ. ಕೃಷ್ಣಾಪುರ , ಡಾ . ಕೆ.ಜಿ. ಭಟ್, ಡಾ. ಸುಪ್ರೀತ್ ಲೋಬೋ, ವಿದ್ಯಾಧರ ಜೈನ್ , ಪುಷ್ಪಲತಾ ತಿಲಕ್, ಗೀತಾ ಕುದ್ದಣ್ಣಾಯ , ಅಂಬಾಪ್ರಸಾದ್ ಪಾತಾಳ, ಹರಿಕಿರಣ್ ಕೊಯಿಲ, ಡಾ. ಗೋವಿಂದ ಪ್ರಸಾದ್ ಕಜೆ, ಅತುಲ್ ಕಾಶ್ಯಪ, ಪದ್ಮನಾಭ ಕುಲಾಲ್, ಗುಡ್ಡಪ್ಪ ಬಲ್ಯ, ಸುರೇಶ್ ರಾವ್ , ಪ್ರಚೇತ್ ಆಳ್ವ ಬಾರ್ಯ, ಶ್ರೀಮತಿ ಶ್ರುತಿ, ಚಂದ್ರಶೇಖರ್ ತಾಳ್ತಜೆ, ಗೀತಾಲಕ್ಷ್ಮೀ ತಾಳ್ತಜೆ ಮೊದಲಾದವರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here