







ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಯುವತಿಯ ಅಶ್ಲೀಲ ಚಿತ್ರಗಳನ್ನು ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿ ಯುವತಿಯ ಬಳಿಯಿಂದ ಸುಮಾರು 10 ಪವನ್ ಚಿನ್ನಾಭರಣ ದೋಚಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸುಪ್ರೀತ್ ಗೌಡ ಯಾನೆ ಲತೀಶ್ ಗೌಡ ಎಂಬಾತ ಜುಲೈನಲ್ಲಿ ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಿತನಾಗಿ ಮೇಸೆಜ್ ಮೂಲಕ ಯುವತಿಯ ಮೊಬೈಲ್ ಸಂಖ್ಯೆ ಪಡೆದು, ಅಶ್ಲೀಲ ಪೋಟೋಗಳನ್ನು ಹಾಕುವಂತೆ ಬೆದರಿಸಿದ್ದಾನೆ. ಚಿತ್ರವನ್ನು ಪಡೆದ ಬಳಿಕ ಯುವತಿಯ ಬಳಿಯಲ್ಲಿರುವ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದು. ಇಲ್ಲದೇ ಹೋದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ ಎಂದು ದೂರಲಾಗಿದೆ.



ಬಳಿಕ ಸ್ನೇಹಿತನೊಬ್ಬನನ್ನು ಯುವತಿ ನೀಡಿದ ಲೊಕೇಶನ್ ಗೆ ಕಳುಹಿಸಿ ಚಿನ್ನಾಭರವಣನ್ನು ಪಡೆದುಕೊಂಡಿದ್ದ. ಮತ್ತೆ ಚಿನ್ನ ಕೇಳಿದಾಗ ಯುವತಿ ಘಟನೆಯನ್ನು ಮನೆಯವರಿಗೆ ಹೇಳಿದ್ದು, ಅವರು ಆತನನ್ನು ಸಂಪರ್ಕಿಸಿದಾಗ ಎಲ್ಲವನ್ನೂ ಹಿಂತಿರುಗಿಸುವುದಾಗಿ ತಿಳಿಸಿದ್ದ. ಇದೀಗ ಚಿನ್ನ ಹಿಂತಿರುಗಿಸದೆ ಮೋಸ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










