ಕಸ್ತೂರಿ ಬೊಳ್ವಾರ್ ಅವರಿಗೆ ಚೈಲ್ಡ್ ರೈಟ್ ಟ್ರೆಸ್ಟ್ ಬೆಂಗಳೂರು ಇವರಿಂದ ಮಕ್ಕಳ ಹಕ್ಕುಗಳ ಸೇವೆಗಾಗಿ ಡಾ.ಪದ್ಮಿನಿ ಪ್ರಶಸ್ತಿ

0

ಪುತ್ತೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ ಡಾ. ಪದ್ಮಿನಿ ಇವರ ಹೆಸರಿನಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರಿಗೆ ನೀಡಲಾಗುವ ಪ್ರಶಸ್ತಿಯನ್ನು ಬೆಂಗಳೂರಿನ ಚೈಲ್ಡ್ ರೈಟ್ ಟ್ರಸ್ಟ್ ಇವರು ಕಸ್ತೂರಿ ಬೋಳುವಾರು ಇವರಿಗೆ ನೀಡಿದ್ದು ಇವರನ್ನು ಪಡಿ ಸಂಸ್ಥೆ ಮಂಗಳೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಅವರು ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಿದರು.


ಪುತ್ತೂರಿನ ಲಯನ್ಸ್ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ರೆನ್ನಿ ಡಿಸೋಜಾ ,ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮೊಹಮ್ಮದ್ ರಫೀಕ ದರ್ಬೆ, ಉಪಾಧ್ಯಕ್ಷ ರೋಹಿಣಿ ರಾಘವ ಆಚಾರ್ಯ ಪುತ್ತೂರು, ಪುತ್ತೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಮಂಜುನಾಥ್, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಇದರ ಸದಸ್ಯ ನಂದ ಪಾಯಸ್ ,ರೋಟರಿ ಎಲೈಟ್‌ನ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು. ಪಡಿ ಸಂಸ್ಥೆಯ ಸಂಯೋಜಕ ಮಮತಾ ಕಾರ್ಯಕ್ರಮ ನಿರೂಪಿಸಿದರು. ಜಯಕುಮಾರಿ ವಂದಿಸಿದರು.

LEAVE A REPLY

Please enter your comment!
Please enter your name here