ಜಿಲ್ಲಾಮಟ್ಟದ ಖೋ –ಖೋ ಪಂದ್ಯಾಟ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ- ದ್ವಿತೀಯ

0

3 ವಿದ್ಯಾರ್ಥಿಗಳು ವಿಭಾಗಮಟ್ಟಕ್ಕೆ ಆಯ್ಕೆ

ಪುತ್ತೂರು: ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಛೇರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಮಂಗಳೂರು ಉತ್ತರ ಇವರ ಸಹಯೋಗದಲ್ಲಿ ಇನ್ಫೆಂಟ್ ಮೇರಿ ಆಂಗ್ಲಮಾಧ್ಯಮ ಶಾಲೆ, ಮಂಗಳೂರು ಉತ್ತರ ವಲಯ ಇಲ್ಲಿ ನಡೆದ ಜಿಲ್ಲಾಮಟ್ಟದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 17ರ ವಯೋಮಾನದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡದ ಆಟಗಾರರಾದ ಎಸ್ ಜಯೇಶ್, ಯಶ್ವಿನ್ ವಿ ಎನ್, ಶ್ರೇಯಸ್ ಮೈಸೂರು ವಿಭಾಗ ಮಟ್ಟದ ಖೋ –ಖೋ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here