ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ 103ನೇ ಮಹಾಸಭೆ

0

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಮಹಾಸಭೆಯು ಸೆ.20ರಂದು ಸಂಟ್ಯಾರು ಸರಸ್ವತಿಪುರಂನ `ಶ್ರೀ ಸರಸ್ವತಿ’ ಸದನದಲ್ಲಿ ನಡೆಯಿತು.


ಭಾರತೀಯ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಬಿ.ವಿ ಭವಾನಿಶಂಕರ ಬೋರ್ಕರ್ ವಿರಾಜಪೇಟೆ ರವರು ಕೈವಲ್ಯ ಶ್ರೀಸಂಸ್ಥಾನ ಗೌಡ ಪಾದಾಚಾರ್ಯ ಮಠ ಕುಲದೇವರಾದ ಶ್ರೀ ಭವಾನಿಶಂಕರ ದೇವರ ಹಾಗೂ ಗುರುವರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ದೀಪ ಪ್ರಜ್ವಲಿಸಿ ಮಹಾಸಭೆಯನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಪ್ರಭು ಸಾರಸ್ವತ ಉಚಿತ ಕಾನೂನು ಸಲಹಾ ಕೇಂದ್ರವನ್ನು ಉದ್ಘಾಟಿಸಿದರು. ಸಂಯೋಜಕ ನ್ಯಾಯವಾದಿ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.


ಸಾಧಕರಿಗೆ ಸನ್ಮಾನ:
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾ ತೀರ್ಪುಗಾರರಾಗಿರುವ ದೈಹಿಕ ಶಿಕ್ಷಣ ಶಿಕ್ಷಕ ವಿದ್ಯಾಶಂಕರ ದಂಬೆ, ಮಾಜಿ ರಾಷ್ಟ್ರಪತಿಗಳ ಅಂಗರಕ್ಷಕರಾಗಿದ್ದ, ಭಾರತೀಯ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಬಿ.ವಿ ಭವಾನಿಶಂಕರ ಬೋರ್ಕರ್ ವಿರಾಜಪೇಟೆ, ಕ್ಯಾಂಪ್ಕೋ ಅಧ್ಯಕ್ಷರು, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಎಸ್.ಆರ್ ಸತೀಶ್ಚಂದ್ರ ಮತ್ತು ಯಕ್ಷಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಗೆರಟೆ ಶಿಲ್ಪ ತಯಾರಕ ಸಚ್ಚಿದಾನಂದ ಪ್ರಭು ಆಜೇರು ಅವರನ್ನು ಸನ್ಮಾನಿಸಿಲಾಯಿತು. 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಮತ್ತು ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡಿದ ಸಮಾಜದ 95ಕ್ಕೂ ಅಧಿಕ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ಸಂಘದ ಉಪಾಧ್ಯಕ್ಷ ಬಾಲಕೃಷ್ಣ ನಾಯಕ್ ಅಜೇರು ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಸುರೇಶ್ ಪ್ರಭು ಸ್ವಾಗತಿಸಿದರು. ಹರಿಪ್ರಸಾದ್ ಶರ್ಮ ಪುಂಡಕಾಯಿ ಪ್ರಸ್ತಾವಣೆಗೈದರು. ಮಲ್ಲಿಕಾ ಕುಕ್ಕಾಡಿ ವಂದಿಸಿದರು. ಗಣೇಶ ನಾಯಕ್ ನೆಕ್ಕರೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಕುಂಟುನಿ ವರದಿ, ಕೋಶಾಧಿಕಾರಿ ಹರೀಶ್ ಬೋರ್ಕರ್ ಕತ್ತಲಕಾನ ಆಯವ್ಯಯ ಹಾಗೂ ಮುಂದಿನ ವರ್ಷದ ಅಂದಾಜು ಬಜೆಟ್ ಮಂಡಿಸಿ ಅನುಮೋದನೆ ಪಡೆಯಲಾಯಿತು.


ಪುರೋಹಿತರು ಹಾಗೂ ಜ್ಯೋತಿಷ್ಯ ತಜ್ಞರಾಗಿರುವ ವೇ.ಮೂ. ಜಗದೀಶ್ ಭಟ್ ಬೆಳ್ತಂಗಡಿ ಪೌರೋಹಿತ್ಯದಲ್ಲಿ ಪ್ರಾತಃಕಾಲ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಶ್ರೀ ಸತ್ಯನಾರಾಯಣ ಪೂಜಾ ವ್ರತ ಕಾರ್ಯಕ್ರಮ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ವಿಷೇಶ ಆಕರ್ಷಣೆಯಾಗಿ ಯಕ್ಷಗಾನ ಕಲಾವಿದ ಸಚ್ಚಿದಾನಂದ ಪ್ರಭು ಅಜೇರು ಅವರ ಗೆರಟೆ ಚಿತ್ರ ಕಲಾ ಪ್ರದರ್ಶನವು ಎಲ್ಲರ ಆಕರ್ಷಣೆಯವಾಗಿತ್ತು. ವೈವಾಹಿಕ ವೇದಿಕೆ ಕೇಂದ್ರದಲ್ಲಿ ಆಸಕ್ತ ವಧು-ವರರ ನೋಂದಣಿ ವ್ಯವಸ್ಥೆ ಸಂಚಾಲಕ ಹರಿಪ್ರಸಾದ ಆದಾಳ ನೇತೃತ್ವದಲ್ಲಿ ನಡೆಯಿತು. ಸಂಘದ ನಿರ್ದೇಶಕರು, ಸದಸ್ಯರು ಸೇರಿದಂತೆ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here