







ಪುತ್ತೂರು: ಕೊಳ್ತಿಗೆ ಗ್ರಾ.ಪಂ.ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಶಿಕಲಾ ಕೆ. ಅವರು ದ್ವಿತೀಯ ದರ್ಜೆ ಲೆಕ್ಕಸಹಾಯಕರಾಗಿ ಪದೋನ್ನತಿ ಹೊಂದಿದ್ದಾರೆ.


2003ರಲ್ಲಿ ಕೊಳ್ತಿಗೆ ಗ್ರಾಮ ಪಂಚಾಯತ್ ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿಆಪರೇಟರ್ ಆಗಿ ಸೇವೆ ಸೇರಿದ ಶಶಿಕಲಾ ಕೆ. ಅವರು ಇದೀಗ ಜಿ.ಪಂ.ಆದೇಶದಂತೆ ದ್ವಿತೀಯ ದರ್ಜೆ ಲೆಕ್ಕಸಹಾಯಕರಾಗಿ ಪದೋನ್ನತಿ ಹೊಂದಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.



ಶಶಿಕಲಾ ಕೆ. ಅವರು ಬಂಟ್ವಾಳ ತಾಲೂಕಿನ ಕಶೆಕೋಡಿ ನಿವಾಸಿ ಪುತ್ತೂರು ಕೃಷ್ಣನಗರ ಆಶೀರ್ವಾದ ಶಾಮಿಯಾನದ ಮಾಲಕರೂ ಆಗಿರುವ ಪುತ್ತೂರು ತಾಲೂಕು ಧ್ವನಿ ಬೆಳಕು ಶಾಮಿಯಾನ ಮಾಲಕರ ಸಂಘದ ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಕಶೆಕೋಡಿ ಅವರ ಪತ್ನಿ.ಮಕ್ಕಳಾದ ಧನ್ವಿತ್ ಕೆ.ಆರ್,ಅನನ್ಯ ಕೆ.ಆರ್ ಅವರೊಂದಿಗೆ ಕೃಷ್ಣನಗರದಲ್ಲಿ ನೆಲೆಸಿದ್ದಾರೆ.










