ಯುವ ಸಾಹಿತಿ ಸತೀಶ್ ಬಿಳಿಯೂರು ಅವರಿಗೆ “ಕನ್ನಡ ಕಲಾ ತಪಸ್ವಿ” ರಾಜ್ಯ ಪ್ರಶಸ್ತಿ 2026

0

ಪುತ್ತೂರು: ಶ್ರೀ ಆರ್ಯಾದುರ್ಗಾದೇವಿ ಪ್ರಕಾಶನ ಕೊಡಮಾಡುವ “ಕನ್ನಡ ಕಲಾ ತಪಸ್ವಿ” ರಾಜ್ಯ ಪ್ರಶಸ್ತಿ 2026ಕ್ಕೆ ಯುವ ಸಾಹಿತಿ ಸತೀಶ್ ಬಿಳಿಯೂರು ಆಯ್ಕೆಯಾಗಿದ್ದಾರೆ.

ಸಾಹಿತ್ಯ ಮತ್ತು ಕನ್ನಡ ಭಾಷೆಯ ಪೋಷಣೆಯಲ್ಲಿ ಯುವ ಜನತೆಗೆ ಮಾದರಿಯಾಗಿರುವ ಇವರು, ಬರವಣಿಗೆಯಲ್ಲಿ ಹೊಸ ಛಾಪು ಮೂಡಿಸಿಕೊಂಡಿದ್ದಾರೆ. ಹಲವಾರು ಕವಿತೆ, ಕಥೆ, ಲೇಖನಗಳನ್ನು ಬರೆದಿದ್ದು, “ನನ್ನೆದೆ ಸಪ್ಪಳ” ಮತ್ತು “ಭಾವದೆಲೆ ಮೇಲೆ ಇಬ್ಬನಿ” ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಈ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ ಶ್ರೀ ಆರ್ಯಾದುರ್ಗಾದೇವಿ ಪ್ರಕಾಶನ, ಹುಬ್ಬಳ್ಳಿಯವರು ರಾಜ್ಯೋತ್ಸವ ಸಡಗರ 2026ರ ಅಂಗವಾಗಿ ನೀಡುವ ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here