







ಬೆಟ್ಟಂಪಾಡಿ: ಬೆಟ್ಟಂಪಾಡಿಯ ನವೋದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಕೋಡ್ ಕ್ರಾಫ್ಟ್ ವಿಜ್ಞಾನ ಸ್ಪರ್ಧೆ” ಯನ್ನು ಸೆ. 18 ರಂದು ಆಯೋಜಿಸಲಾಯಿತು. ಶಾಲಾ ಮಟ್ಟದ ಈ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ 16 ತಂಡಗಳು ಭಾಗವಹಿಸಿದರು. ವಿದ್ಯಾರ್ಥಿನಿಯರಾದ ತೃಪ್ತಿ, ಶ್ರೀಜಾ,ಕೃತಿಕಾ,ಯಶ್ವಿನಿ,ಲತೀಕ್ಷಾ ಇವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು.
ಸ್ಪರ್ಧೆಗೆ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಪ್ರೊಜೆಕ್ಟ್ ಮ್ಯಾನೇಜರ್ ಆಗಿರುವ ಹೇಮಂತ್ ಇವರು ತೀರ್ಪುಗಾರರಾಗಿ,ಆಗಮಿಸಿ ಮಾದರಿಗಳನ್ನು ವೀಕ್ಷಿಸಿ, 6 ತಂಡಗಳನ್ನು ಬಹುಮಾನಗಳಿಗೆ ಆಯ್ಕೆ ಮಾಡಿದರು. ಎಲ್ಲಾ ಮಾದರಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ,ಜಿಲ್ಲಾ ಮಟ್ಟಕ್ಕೆ 3 ತಂಡಗಳನ್ನು ಆಯ್ಕೆ ಮಾಡಿ,ಈ ಮಾದರಿಯ ಅಭಿವೃದ್ಧಿಯ ಕುರಿತು ಸಲಹೆ ಸೂಚನೆಗಳನ್ನು ನೀಡಿ,ವಿಜೇತರ ಪಟ್ಟಿಯನ್ನು ವಾಚಿಸಿದರು. 8ನೇ ತರಗತಿಯ ವಿದ್ಯಾರ್ಥಿಗಳಾದ ಸನ್ವಿತ್ ಮತ್ತು ಯಶ್ವಿನ್ 1000ರೂ ನಗದು ಪುರಸ್ಕಾರ ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು. 8ನೇ ತರಗತಿಯ ವಿದ್ಯಾರ್ಥಿನಿಯರಾದ ಆಯಿಷತ್ ಸುಹಾನ ಮತ್ತು ಫಿದಾ ಇವರು 750ರೂ ನಗದು ಪುರಸ್ಕಾರ, ಬೆಳ್ಳಿಯ ಪದಕ, ಪ್ರಶಸ್ತಿ ಪತ್ರವನ್ನು ಪಡೆದರು.10ನೇತರಗತಿಯ ಶ್ರೀಜಾ ಮತ್ತು 9ನೇ ತರಗತಿಯ ಮಿಥುನ್ ಕುಮಾರ್ ಇವರು ಕಂಚಿನಪದಕದೊಂದಿಗೆ 500ರೂ ನಗದು ಪುರಸ್ಕಾರ ಮತ್ತು ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರಥಮ, ದ್ವಿತೀಯ , ತೃತೀಯ ಬಹುಮಾನ ಪಡೆದ ತಂಡಗಳು ನವೆಂಬರ್ ತಿಂಗಳಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತದೆ.
ಶ್ರೀಜಾ ಮತ್ತು ಆಯಿಷತ್ ಸುಹಾನ ಅನಿಸಿಕೆಯನ್ನು ವ್ಯಕ್ತಪಡಿಸಿದರು. 8ನೇತರಗತಿಯ ಮೊಹಮ್ಮದ್ ಅಫ್ ಹಮ್ ಮತ್ತು ತುಷಾರ್ 4ನೇ ಸ್ಥಾನ,ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಾದ ಮೊಹಮ್ಮದ್ ಶಾಮಿಲ್ ಮತ್ತು ಮೊಹಮ್ಮದ್ ಶಮ್ಮಾಸ್ ಹಾಗೂ ವಿದ್ಯಾರ್ಥಿನಿಯರಾದ ನುಹಾ ಫಾತಿಮಾ ಮತ್ತು ಕೃತಿಕಾ ಈ ಎರಡು ತಂಡಗಳು 5 ನೇ ಸ್ಥಾನದೊಂದಿಗೆ ,3 ತಂಡಗಳು ಪ್ರೋತ್ಸಾಹಕ ಬಹುಮಾನವನ್ನು ಪಡೆದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.



ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಆಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ಇವರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಒದಗಿಸಿರುವ ನ್ಯಾಪ್ಕಿನ್ ಬರ್ನಿಂಗ್ ಯುನಿಟ್ ನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಇಂತಹ ಮಾದರಿ ಸ್ಪರ್ಧೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿವಂತೆ ತಿಳಿಸಿದರು. ಅಕ್ಷಾಂಶ ಚಾರಿಟೇಬಲ್ ಟ್ರಸ್ಟ್ ನವರ ಕೊಡುಗೆಯನ್ನು ಸ್ಮರಿಸಿಕೊಂಡರು. ನವೋದಯ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಚಂದ್ರಹಾಸ ಮೂರೂರು ನ್ಯಾಪ್ಕಿನ್ ಬರ್ನಿಂಗ್ ಯುನಿಟ್ ನ್ನು ಕೊಡುಗೆಯಾಗಿ ನೀಡಿರುವ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರಾದ ಶ್ರೀಶಾ ಭಟ್ ಮತ್ತು ಹೇಮಂತ್ ಇವರಿಗೆ ಆಡಳಿತ ಮಂಡಳಿಯ ಪರವಾಗಿ ಕೃತಜ್ಞತೆಯನ್ನು ಸಮರ್ಪಿಸಿದರು.




ಈ ಕಿಟ್ಟನ್ನು ಅಳವಡಿಸಲು ಅಗತ್ಯವಿರುವ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಜೇಸಿಯ ವತಿಯಿಂದ ಒದಗಿಸಲು ಸಹಕರಿಸಿದ, ಕೊಂಬೆಟ್ಟಿನಲ್ಲಿರುವ ಪಶುಪತಿ ಎಲೆಕ್ಟ್ರಿಕಲ್ಸ್ ಇದರ ಮಾಲಕರಾದ ಪಶುಪತಿಯವರ ಸಹಾಯವನ್ನು ಸ್ಮರಿಸಿಕೊಂಡರು. ವಿಜ್ಞಾನ ಮಾದರಿಯಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವೈಜ್ಞಾನಿಕ ಚಿಂತನೆಯು ಹೆಚ್ಚಿ ಸರ್ವತೋಮುಖವಾಗಿ ಬೆಳವಣಿಗೆಯನ್ನು ಹೊಂದುತ್ತಾರೆ. ಇದು ಅವರ ಮುಂದಿನ ಜೀವನದಲ್ಲಿ ಸಹಾಯವಾಗಬಲ್ಲದು ಎಂಬುದನ್ನು ತಿಳಿಸಿದರು.

ಮುಖ್ಯ ಗುರು ಪುಷ್ಪಾವತಿ ಎಸ್ ಇವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜ್ಞಾನ ಶಿಕ್ಷಕಿ ಭುವನೇಶ್ವರಿ ಎಂ ಇವರು ವಿಜ್ಞಾನ ಮಾದರಿ ಸ್ಪರ್ಧೆಯ ಮಹತ್ವವನ್ನು ವಿವರಿಸಿ, ಧನ್ಯವಾದ ಸಮರ್ಪಿಸಿದರು. ಸಂಸ್ಕೃತ ಶಿಕ್ಷಕಿ ಶೋಭಾ ಬಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಶಿಕ್ಷಕಿ ಸುಮಂಗಲಾ ಕೆ,ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ.ಪಿ, ಶಿಕ್ಷಕ ರಾಧಾಕೃಷ್ಣ ಕೋಡಿ,ಶಿಕ್ಷಕಿ ಗೌತಮಿ ಬಿ , ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು.










