







ಪುತ್ತೂರು: ಸೆ.19 ರಂದು ಹೈದರಾಬಾದ್‌ನ ಸೈಬರ್ ಗಾರ್ಡನ್ ಕನ್ವೆನ್ಷನ್ ಸೆಂಟರ್, ಜುಬಿಲಿ ಎನ್‌ಕ್ಲೇವ್ ಹೈಟೆಕ್ ಸಿಟಿಯಲ್ಲಿ ನಡೆದ ವಿಜ್ಞಾನ ಯೋಜನಾ ಪ್ರದರ್ಶನದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿನಿಯರು “Med4U” ಯೋಜನೆಗೆ “ಬೆಸ್ಟ್ ಫೇವರಿಟ್ ಅವಾರ್ಡ್” ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.


10ನೇ ತರಗತಿಯ ವಿದ್ಯಾರ್ಥಿನಿಯರಾದ ದ್ರಿಶಾ ಪಿ (ನರಿಮೊಗರು ಪ್ರಶಾಂತ್ ಎಂ.ಪಿ ಮತ್ತು ತ್ರಿವೇಣಿ ಪುತ್ರಿ), ಲಾವಣ್ಯ ನಾಯಕ್ ಕೆ (ಮುಂಡೂರು ಲವ ಕುಮಾರ್ ಮತ್ತು ನಳಿನಾಕ್ಷಿ ನಾಯಕ್ ಪುತ್ರಿ) ಹಾಗೂ ಬೃಂದಾ ಆರ್.ಕೆ (ಕೆಮ್ಮಿಂಜೆ ರಮೇಶ್ ಕೆ ಮತ್ತು ಶೋಭಾ ಪುತ್ರಿ) ಪ್ರಶಸ್ತಿ ಪಡೆದವರು. ಈ ಯೋಜನಾ ತಂಡದಲ್ಲಿ ಒಟ್ಟು ಐವರು ವಿದ್ಯಾರ್ಥಿನಿಯರಿದ್ದು, ಉಳಿದ ಇಬ್ಬರು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿನಿಯರು.



18 ವರ್ಷದೊಳಗಿನ ಯುವ ಸೃಜನಶೀಲರಿಗೆ ತಮ್ಮ ತಂತ್ರಜ್ಞಾನ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ Coolest Projects India ಕಾರ್ಯಕ್ರಮದಲ್ಲಿ ಈ ಸಾಧನೆ ಮಾಡಲಾಗಿದೆ. ಗೂಗಲ್ ಮತ್ತು ಎರಿಕ್ಸನ್ ಕಂಪನಿಗಳು ಜಂಟಿಯಾಗಿ ವಿಶ್ವದಾದ್ಯಂತ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್, ಡಿಜಿಟಲ್ ತಂತ್ರಜ್ಞಾನ ಹಾಗೂ ಕೌಶಲ್ಯ ಹೆಚ್ಚಿಸುವುದು ಇದರ ಉದ್ದೇಶ.
ವಿದ್ಯಾರ್ಥಿನಿಯರಿಗೆ ಮೂಲತಃ ಪುತ್ತೂರಿನವರಾಗಿದ್ದು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಆನಂದವರ್ಧನ್ ಅವರು ಒಂದು ವರ್ಷ ತರಬೇತಿ ನೀಡಿ, Optimist Club of Hillsboro ವತಿಯಿಂದ ಉಚಿತವಾಗಿ ಲ್ಯಾಪ್‌ಟಾಪ್ ಕೊಡಿಸುವ ಮೂಲಕ ಸಹಕರಿಸಿದ್ದಾರೆ.
ವಿಶ್ರಾಂತ ವಿಜ್ಞಾನ ಶಿಕ್ಷಕಿ ವಸಂತಿ ಕೆ., ಸಂಚಾಲಕ ಕಾವು ಹೇಮನಾಥ ಶೆಟ್ಟಿ, ವಿಜ್ಞಾನ ಶಿಕ್ಷಕಿ ಮಾನಸ, ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ಹಾಗೂ ಪೋಷಕರ ಮಾರ್ಗದರ್ಶನದಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.










