







ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಪುತ್ತೂರು ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ॥ ಎ. ಹೇಮಾವತಿ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಕಾವು ವಲಯದ ಬಡಗನ್ನೂರು ಕಾರ್ಯಕ್ಷೇತ್ರದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳು ಬಡಗನ್ನೂರು ‘ಎ’ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಸೆ. 20 ರಂದು ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ನಾರಾಯಣ ಭಟ್ ಬೀರ್ನೊಡಿ ದೀಪ ಪ್ರಜ್ವಲಿಸಿ ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಡವರ ಪಾಲಿಗೆ ಆಶಾದೀಪ ಬದುಕಿನ ಜತೆಗೆ ಸಂಸ್ಕಾರ ಸಂಸ್ಕೃತಿ ನೀಡುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿ ಕೊಟ್ಟಿದೆ ಎಂದು ಹೇಳಿ ಶುಭ ಹಾರೖೆಸಿದರು.



ಕಾವು ವಲಯ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ನಾರಾಯಣ ರೈ ಕುದ್ಮಾಡಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷ ತಂದಿದೆ ಪಾನ ಮುಕ್ತ ಸಮಾಜ ನಿರ್ಮಾಣದ ಕನಸು ಕಂಡ ಪೂಜ್ಯ ವೀರೇಂದ್ರ ಹೆಗಡೆ ಜನಜಾಗೃತಿ ವೇದಿಕೆ ಮುಖಾಂತರ ಮದ್ಯವರ್ಜನಾ ಶಿಬಿರ ಮೂಲಕ ಹಲವಾರು ಕುಟುಂಬಗಳ ಪಾಲಿಗೆ ನಂದ ದೀಪವಾಗಿದ್ದಾರೆ ಮದ್ಯವರ್ಜನಾ ಶಿಬಿರ ಮತ್ತು ಯೋಜನೆ ಮೂಲಕ ನಡೆಯುವ ಮತ್ತಿತರ ಕಾರ್ಯಕ್ರಮಗಳಿಗೆ ನಾನು ಸಹಕಾರ ನೀಡುತ್ತ ಬರುತ್ತಿದ್ದೇನೆ. ಮುಂದೆಯೂ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೖೆಸಿದರು.

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು ರವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಮಾಜದ ಸರ್ವತೋಮುಖ ಬೆಳವಣೆಗೆ ಹಾಗೂ ಸರಕಾದದ ಚಿಂತನೆಗಳಿಗೆ ಪೂರಕವಾಗಿ, ಹತ್ತುಹಲವು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದೆ.ಜತೆಗೆ ಸುಸಂಸ್ಕೃತ ಜೀವನ ಪದ್ದತಿ ಕಳಿಸಿಕೊಟ್ಟಿದೆ. ಯೋಜನೆಯ ಸದಸ್ಯರು ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಹಕರಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಪುತ್ತೂರು ಶ್ರೀ. ಕ್ಷೇ.ಧ. ಗ್ರಾ. ಯೋಜನೆ ಬಿ. ಸಿ. ಟ್ರಸ್ಟ್ ರಿ ನ ಯೋಜನಾಧಿಕಾರಿ ಶಶಿಧರ್ ಎಂ ಮಾತನಾಡಿ ಸುಮಾರು 40 ವರ್ಷದ ಕಷ್ಟ ಜೀವನದಲ್ಲಿ ಬೆಳೆದು ಬಂದವರು ನಾವು ಯಾರು ಬಡವರಾಗಿ ಮತ್ತು ಶ್ರೀಮಂತರಾಗಿ ಹುಟ್ಟಿಬರಲಿಲ್ಲ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆನಂತರದಲ್ಲಿ ಸ್ವತಂತ್ರವಾಗಿ ಬದಕಲು ಕಲಿತ್ತೇವೆ ಹೂರತು ಜೀವನ ಬದಲಾವಣೆ ಹೊಂದಿಲ್ಲ. ಆಧಕ್ಕೆ ಕೆಲವು ಸಂಪ್ರದಾಯ ಹೊರಗೆ ಬರಲು ಒಂದಿಷ್ಟು ತೊಡಗಕುಗಳು ಇದ್ದವು ಈ ತೊಡಕುಗಳನ್ನು ಹೋಗಲಾಡಿಸಲು ಪೂಜ್ಯ ಕಾವೊಂದರು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಂಡು ಒಂದು ಹಳ್ಳಿ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಮನಗಂಡವರು ಪೂಜ್ಯ ಕಾವೊಂದರು.
ಹಿಂದೆ ಪುರುಷ ಪ್ರಧಾನ ಸಮಾಜ ಇತ್ತು. ಮಹಿಳೆ ನಾಲ್ಕು ಗೋಡೆ ಮಧ್ಯೆ ಸೀಮಿತ ವಾಗಿದ್ದಳು ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹಂತ ಹಂತವಾಗಿ ಕಾರ್ಯಕ್ರಮ ಹಾಕಿಕೊಂಡು ಇಂದು ಬದಲಾವಣೆ ಗೊಂಡು ಪುರುಷ ಪ್ರಧಾನ ವ್ಯವಸ್ಥೆ ಮಧ್ಯದಲ್ಲಿ ಮಹಿಳೆಯು ಸಮಾನವಾಗಿ ನಿಂತಿರುವುದು ಸರಕಾರದ ವಿವಿಧ ಯೋಜನೆಗಳ ಜತೆಗೆ ಗ್ರಾಮಾಭಿವೃದ್ಧಿ ಪಾಲು ಇದೆ ಎಂಬುವುದು ಸಂತೋಷ ತಂದಿದೆ. ಮಹಿಳೆಗೆ ಆತ್ಮಸೖೆರ್ಯ ತರುವಂತದು ರೖೆತರ ಬಗ್ಗೆ ಸಂಘಟನೆ ಮಾಡುವ ಬಗ್ಗೆ ಹಲವರು ಪೂಜ್ಯರನ್ನು ಕೊಂಡಾಡುತ್ತಿದ್ದಾರೆ ಸಂಘ ಸೀಮಿತವಾಗಿ ಕಟ್ಟಿ ಹಾಕಿ ಸಂಘ ಅಂದರೆ ಸಾಲ, ಸಾಲ ಅಂದರೆ ಸಂಘ ಅಂದುಕೊಂಡಿದ್ದಾರೆ ಆದರೆ ಸಂಘ ಬರೀ ಸಾಲ ಮಾತ್ರ ನೀಡುವುದಿಲ್ಲ ಜತೆಗೆ ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತನೆ ಮಾಡುತ್ತದೆ ಎಂದ ಅವರು ಪೂಜ್ಯರು ಸಾಮಾಜಿಕವಾಗಿ ಜನರ ಪರಿವರ್ತನಗಾಗಿ ಹಣಕಾಸಿನ ವ್ಯವಸ್ಥೆಯನ್ನು ಕಾನೂನು ಬಾಹಿರವಾಗಿ ನೀಡಿದ್ದಾರೆ ಎಂದು ಅಪಪ್ರಚಾರ ಕೆಲವರು ಮಾಡಿದ ಬಗ್ಗೆ ಸ್ವಷ್ಟಿಕರಣ ಮಾಡಿದ ಅವರು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಬಡವರಿಗೆ ನೀಡಿದ ಹಣಕಾಸಿನ ವ್ಯವಸ್ಥೆಯನ್ನು ದೇಶದ ಆರು ರಾಷ್ಟ್ರೀಕೃತ ಬ್ಯಾಂಕ್ ನಿಂದ ಕಾನೂನ್ಮಾಕವಾಗಿ ನೀಡಿದ್ದಾರೆ ಹೊರತು ದೇವಸ್ಥಾನದ ಹೊಂಡಿಯಿಂದ ನೀಡುತ್ತಿಲ್ಲ ಆದರೆ ಧರ್ಮಸ್ಥಳ ಮಂಜುನಾಥನ ಸಂಕಲ್ಪದಲ್ಲಿ ಇಷ್ಟೊಂದು ದೊಡ್ಡ ವ್ಯವಸ್ಥೆ ಕಾವೊಂದರ ಮೂಲಕ ಆಗಿದೆ.
ಬಡವರಿಗೆ ಕೊಟ್ಟ ಹಣ ಸೇಟ್ ಬ್ಯಾಂಕ್ ಆಪ್ ಇಂಡಿಯಾ ದಿಂದ ನೀಡಲಾಗುತ್ತಿದೆ ಗ್ರಾಮಾಭಿವೃದ್ಧಿ ಯೋಜನೆ ಲೆಕ್ಕಚಾರ ತೆರೆದ ಪುಸ್ತಕ ಇದ್ದಹಾಗೆ ಎಲ್ಲಾವೂ ಕಾನೂನಾತ್ಮಕವಾಗಿದೆ. ಗ್ರಾಮಾಭಿವೃದ್ದಿ ಯೋಜನೆ ಇಷ್ಟೂಂದು ಕಾರ್ಯಕ್ರಮಗಳು ಮಂಜುನಾಥ ದೇವರ ಅಪ್ಪಣೆಯಲ್ಲಿ ಪೂಜ್ಯರು ಮಾಡುತ್ತಿದ್ದಾರೆ ಎಂದ ಅವರು ಒಕ್ಕೂಟ ವ್ಯವಸ್ಥೆಯಿಂದ ಸಮರ್ಥನೆ ನಾಯಕತ್ವ,, ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿದೆ ಪೂಜ್ಯರು ಶೌರ್ಯ ವಿಪತ್ತು ಘಟಕವನ್ನು ಹುಟ್ಟು ಹಾಕಿ ಆ ಮೂಲಕ ಸಮಾಜಮುಖಿ ತುರ್ತು ಸೇವೆ ಮಾಡುತ್ತ ಬರುತ್ತಿರವುದು ಎಲ್ಲಾರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿ ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಶುಭ ಹಾರೖೆಸಿದರು.
ಪುತ್ತೂರು ಕೇಂದ್ರ ಒಕ್ಕೂಟ ಅಧ್ಯಕ್ಷ ಉದಯ್ ಕುಮಾರ್, ಮಾತನಾಡಿ ತಲಾ ಮಟ್ಟದ ಸಾಮಾನ್ಯ ಸದಸ್ಯರಿಗೆ ಸ್ಥಾನ ಕೊಡುವ ಸಂಸ್ಥೆ ಅಂದರೆ ಗ್ರಾಮಾಭಿವೃದ್ದಿ ಯೋಜನೆ.ಬ್ಯಾಂಕ್ ಮುಖಾಂತರ ಕಡಿಮೆ ಬಡ್ಡಿಯಲ್ಲಿ ತೋರಿತಗತಿಯಲ್ಲಿ ಸಾಲ ನೀಡಿ ನಮ್ಮ ಜೀವನ ಶೖೆಲಿ ಬದಲಾವಣೆ ಮಾಡಿದೆ. ಪ್ರಗತಿ ರಕ್ಷಕವಚ ಯೋಜನೆ ಮೂಲಕ ಸಾಲಗಾರನಿಗೆ ಯಾವುದೇ ಆಪತ್ತು ಸಂಭವಿಸಿದಲ್ಲಿ ಸಾಲಗಾರ ಮನೆಗೆ ಹೋಗಿ ಸಾಲ ಮರುಪಾವತಿ ಕೇಳದೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಬರುವ ಸಂಸ್ಥೆ ಇದ್ದರೆ ಅಧು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾತ್ರ. ಈ ನಿಟ್ಟಿನಲ್ಲಿ ಯೋಜನೆ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುವ, ಮುಂದೆ ಒಕ್ಕೂಟವು ತಾಲೂಕಿನಲ್ಲಿಯೇ ಮಾದರಿ ಒಕ್ಕೂಟ ಹೊರಹೊಮ್ಮಲಿ ಎಂದು ಶುಭ ಹಾರೖೆಸಿದರು.

ಕಾವು ವಲಯ ಜನಜಾಗೃತಿ ವೇದಿಕೆ ಸದಸ್ಯ ಸಂತೋಷ್ ಆಳ್ವ ಮಾತನಾಡಿ, ಸರಕಾರದ ಮಟ್ಟದಲ್ಲಿ ಆಗಬೇಕಾದ ಎಲ್ಲ ಕಾರ್ಯಕ್ರಮ ವೀರೇಂದ್ರ ಹೆಗಡೆ ರವರ ಮೂಲಕ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಜನರಿಗೆ ಉಳಿತಾಯದ ಪ್ರವೃತ್ತಿ ಬೆಳೆಸಿ ಅಭಿವೃದ್ಧಿ ಪರ ಕಾರ್ಯಕ್ರಮ ಅನುಷ್ಠಾನ ಗೊಳಿಸಿ ಮಾಹಿತಿ ಮಾರ್ಗದರ್ಶನ ನೀಡುವ ಮೂಲಕ ಬಡ ಕುಟುಂಬದ ಅಸರೆಯಾಗಿದೆ ಎಂದು ಹೇಳಿದರು.
ಸಮಾರಂಭವು ಬಡಗನ್ನೂರು ಎ ಒಕ್ಕೂಟ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ವೇದಿಕೆಯಲ್ಲಿ ಕಾವು ವಲಯ ವಲಯಾಧ್ಯಕ್ಷ ದಿನೇಶ್ ರೈ ಕುತ್ಯಾಳ, ಪಟ್ಟೆ ಬಡಗನ್ನೂರು ಬಿ ಒಕ್ಕೂಟ ಅಧ್ಯಕ್ಷ ಕೃಷ್ಣ ಪಾಟಾಳಿ, ಸಂಘದ ಹಿರಿಯ ಸದಸ್ಯ ನಾರಾಯಣ ಗೌಡ ಉಳಯ, ಒಕ್ಕೂಟ ಉಪಾಧ್ಯಕ್ಷೆ ಸುಜಾತ ಏರಾಜೆ, ಕಾರ್ಯದರ್ಶಿ ಭಾರತಿ ರೈ ಕುದ್ಕಾಡಿ, ಜೊತೆ ಕಾರ್ಯದರ್ಶಿ ಶಿವಶಂಕರ ಕುಲಾಲ್ ಕೋಶಾಧಿಕಾರಿ ದಿನೇಶ್ ಮೈರೂಳು ನೂತನ ಅಧ್ಯಕ್ಷ ಗಿರೀಶ್ ದೇವಸ್ಯ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ನಾಯಕ್ ಮೇಗಿನ ಮನೆ,, ಕಾರ್ಯದರ್ಶಿ ಶೋಭಾ, ಜತೆ ಕಾರ್ಯದರ್ಶಿ ಗಣೇಶ್ ಪಿ. ಕೋಶಾಧಿಕಾರಿ ಪುಷ್ಪ ಪದಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು ಆರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮವು ನಡೆಯಿತು.
ಸನ್ಮಾನ : ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ತನುಶ್ರೀ ರೖೆ ಬಡಕ್ಕಾಯೂರು ರವರನ್ನು ಪೇಟ ಧರಿಸಿ ಶಾಲು, ಹಾರ ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಗೌರವಾರ್ಪಣೆ
ಅರಿಯಡ್ಕ ವಲಯ ಶೌರ್ಯ ವಿಪತ್ತು ನಿರಾವಹಣಾ ತಂಡದ ಸದಸ್ಯರನ್ನು ಶಾಲು, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು.
ಕಾವು ವಲಯ ಮೇಲ್ವಿಚಾರಕಿ ಪ್ರಣೀತ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸಾವಿತ್ರಿ ಪೊನ್ನತ್ತಡ್ಕ ವಂದಿಸಿದರು ಬೆಟ್ಟಂಪಾಡಿ ಪ್ರೀಯದರ್ಶಿನಿ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ಕೃಷ್ಣವೇಣಿ ಕಾರ್ಯಕ್ರಮ ನಿರೂಪಿಸಿದರು.










