ಪುತ್ತೂರು ತಾಲೂಕಿನ 17 ಮಂದಿಗೆ ಜಿಲ್ಲಾ ಮಟ್ಟದ ಸಾವಯವ ಕೃಷಿಕ ಪ್ರಶಸ್ತಿ

0

ಬಡಗನ್ನೂರು: ಬಿ.ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಾವಯವ ಕೃಷಿ ಯೋಜನೆ ಮಂಗಳ ಸಮೃದ್ಧಿ ವಿಭಾಗ ಇದರ, 2026-27ನೇ ಸಾಲಿನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗ ಮಟ್ಟದಲ್ಲಿ ನೀಡಲಾಗುವ ‘ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಗತಿಪರ ಸಾವಯವ ಕೃಷಿಕ’ ಪ್ರಶಸ್ತಿಯನ್ನು ಪುತ್ತೂರು,ತಾಲೂಕಿನಲ್ಲಿ 17 ಮಂದಿ ಕೃಷಿಕರು ಭಾಜನಾರಾಗಿದ್ದಾರೆ.

ಪುತ್ತೂರು ತಾಲೂಕು  ಅರಿಯಡ್ಕ  ಗ್ರಾಮದ ಗುಂಡ್ಯಡ್ಕ ನಿವಾಸಿ  ವಾಸು ಪೂಜಾರಿ ಗುಂಡ್ಯಡ್ಕ, ಕುತ್ಯಾಡಿ  ನಿವಾಸಿಯಾಗಿರುವ ಪ್ರಗತಿಪರ ಕೃಷಿಕ,  ಕುಂಬ್ರ ಕೃಷಿ ಪತ್ತಿನ ಸಹಕರಿ ಸಂಘದ ನಿರ್ದೇಶಕ  ತಿಲಕ್ ರೖೆ ಕುತ್ಯಾಡಿ, ಹಾರಕೆರೆ ನಿವಾಸಿ  ನಾರಾಯಣ ಭಟ್ ಹಾರಕೆರೆ, ಕುರಿಯ ಗ್ರಾಮದ ಕೈಂತಿಲ ನಿವಾಸಿ  ಕೀರ್ತಿ ಭಟ್, ಕೈಂತಿಲ , ಬಡಗನ್ನೂರು ಗ್ರಾಮದ ನೂಚಿಲೋಡು ನಿವಾಸಿ ವಿನಯ ಭಟ್ ನೂಚಿಲೋಡು,ಸಹಿತ 17 ಮಂದಿ ಕೃಷಿಕರಿಗೆ ಜಿಲ್ಲಾ ಮಟ್ಟದ  ಪ್ರಶಸ್ತಿ  ಪ್ರಧಾನ ನಡೆಯಿತು.

ಈ ಸಂಧರ್ಭದಲ್ಲಿ ಕರ್ನಾಟಕ ಸಾವಯವ ಕೃಷಿ ಯೋಜನೆಯ ಆಡಳಿತ ನಿರ್ದೇಶಕ ಮೋಹನ್ ಗೌಡ,  ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮಿಜಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್‌ ಆ‌ರ್.ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೂಡ ಅಧ್ಯಕ್ಷ ಬೇಬಿ ಕುಂದ‌ರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾಲಕೃಷ್ಣ ಅಂಚನ್, ನಿವೃತ್ತ ಸೈನಿಕ ಅಮ್ಮಣ್ಣ ರೈ ಪುತ್ತೂರು, ಹಿರಿಯ ಕೃಷಿಕ ಪೊಸಂದೋಡಿ ದುಗ್ಗಪ್ಪ ಗೌಡ ಬೆಳ್ತಂಗಡಿ ,ಸಹಾಯಕ ಆಡಳಿತ ನಿರ್ದೇಶಕಿ ಅಶ್ವಿನಿ ಮೋಹನ್ ಕುಮಾರ್, ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ಕಿಶೋ‌ರ್ ಗೌಡ ಶಿರಾಡಿ, ಪ್ರಮುಖರಾದ ಮಾಳ ವಿನಿತ್ ಹೆಗ್ಡೆ ಕಾರ್ಕಳ, ಮನ್ಮಥ ನಾಯಕ್ ಹೆಬ್ರಿ,ರಾಮಮೂರ್ತಿ ಕಲ್ಕೂರು ಹೆಬ್ರಿ, ಲ್ಯಾನ್ಸಿ ಪಿರೇರಾ ಪೊನ್ನಂಗಿಲ, ಜಯಪ್ರಕಾಶ್ ಬದಿನಾರ್, ಆನಂದ ಸಿ.ಎಚ್‌.ಮುಳ್ಳೇರಿಯ, ಈಶ್ವರ ಗೌಡ,  ಮುಖ್ಯಾಧಿಕಾರಿ ಭಾರತಿ ರೈ ಅರಿಯಡ್ಕ ಪುತ್ತೂರು ಪೂರ್ಣಿಮಾ ಅಡೂರು  ಹಿರಿಯ  , ಶಾರದಾ ಶೆಟ್ಟಿ ಕಾರ್ಕಳ . ರಾಜೀವ್‌ ಕಕ್ಯಪದವು  ಈಶ್ವರ್ ನ್ಯಾಕ್  ಪುತ್ತೂರು  ಬಲ್ನಾಡು,ಅಜಿತ್ ಕುಮಾರ್, ಪಾಣಾಜೆ, ದೀಕ್ಷಿತ್ ಕುಮಾರ್, ಕೆಮ್ಮಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here