ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ

0

ಪುತ್ತೂರು: ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಡಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಅವರು, ಸಂಘವು 2025-26 ನೇ ಸಾಲಿನಲ್ಲಿ 2,93,196.59 ರೂ, ಲಾಭ ಗಳಿಸಿದ್ದು, ಲಾಭದಲ್ಲಿ ಶೇ.13% ಡಿವಿಡೆಂಡ್, ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 85 ಪೈಸೆ ಬೋನಸ್ ನೀಡಲಾಗುವುದು, ಸಂಘದಲ್ಲಿ ಒಟ್ಟು 409 ಸದಸ್ಯರಿದ್ದು 67,670 ಪಾಲು ಬಂಡವಾಳವಿದೆ.1,63,453 ಲೀ ಹಾಲು ಸಂಗ್ರಹವಾಗಿದ್ದು, 124 ಮಂದಿ ಹಾಲು ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಚಂದ್ರಾವತಿ ಕುದ್ಕುಳಿ (ಪ್ರಥಮ) ವಾಡ್ಯಪ್ಪ ಗೌಡ ಚಾಮೆತಕುಮೇರು, (ದ್ವಿತೀಯ) ಹಾಗೂ ರತ್ನಾಕೆ ಕೊಂರ್ಬಡ್ಕ (ತೃತೀಯ) ಇವರಿಗೆ ಬಹುಮಾನ ವಿತರಿಸಲಾಯಿತು.ಅಲ್ಲದೆ 2025-26 ನೇ ಸಾಲಿನಲ್ಲಿ ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ದ.ಕ ಹಾಲು ಒಕ್ಕೂಟದ ಮಂಗಳೂರು ಇದರ ಪುತ್ತೂರು ವಿಭಾಗದ ವಿಸ್ತರಣಾಧಿಕಾರಿ ವಿದ್ಯಾ ಬಿ.ಬಿ, ಸಂಘದ ಉಪಾಧ್ಯಾಕ್ಷ ಬೆಳ್ಯಪ್ಪ ಗೌಡ ಹಾಗೂ ನಿರ್ದೆಶಕರಾದ,ತಿರುಮಲೇಶ್ವರ ಗೌಡ, ಕೆ ಎಸ್ ಮುರಳಿಕೃಷ್ಣ, ಸುಬ್ರಹ್ಮಣ್ಯ ಗೌಡ ಸಿ.ಆರ್, ಕರುಣಾಕರ.ಕೆ, ಧನಂಜಯ ಪೂಜಾರಿ ,ಬಿ.ವಾಡಪ್ಯ ಗೌಡ, ಶಿವರಾಮ, ಕೆ.ಗಣಪಯ್ಯ ನಾಯ್ಕ, ಜಲಾಜಾಕ್ಷಿ, ಚಂದ್ರಾವತಿ, ಸಂಘದ ಸ್ಥಾಪಕಾಧ್ಯಕ್ಷ ಕೆ.ಆರ್.ಲಕ್ಷ್ಮಣ ಗೌಡ ಹಾಗೂ ಮಾಜಿ ಅಧ್ಯಕ್ಷರುಗಳು,ಮಾಜಿ ನಿರ್ದೆಶಕರು ಸೇರಿದಂತೆ ಸಂಘದ ಸದಸ್ಯರು ಪಾಲ್ಗೊಂಡರು.

ಸನ್ಮಾನ ಕಾರ್ಯಕ್ರಮ

ಸಂಘದ ಹಿರಿಯ ಸದಸ್ಯರಾದ ಕೂಸಣ್ಣ ಗೌಡ ಕುದ್ಕುಳಿ, ಪಿ.ಶಿವರಾಮ ಹೊಳ್ಳ ಕೊಂರ್ಬಡ್ಕ, ಸುಂದರಿ.ಕೆ ಒರ್ಕೊಂಬು, ರಾಧಾಕೃಷ್ಣ ಗೌಡ ಕೊಂರ್ಬಡ್ಕ ,ನಾರಾಯಣ ಗೌಡ ಕೊಂರ್ಬಡ್ಕ ಇವರನ್ನು ಸಂಘದ ಅಧ್ಯಕ್ಷರು,ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ವಿಧ್ಯಾ.ಬಿ.ಬಿ ಸಂಘದ ನಿರ್ದೇಶಕರು ಇವರು ಸನ್ಮಾನಿಸಿದರು.

ಸದಸ್ಯರ ಮಕ್ಕಳಿಗೆ ಸನ್ಮಾನ :- ಶೈಕ್ಷಣಿಕವಾಗಿ ಸಾಧನೆಗೈದ ಸದಸ್ಯರಾದ ಶಿವಪ್ರಸಾದ್ ಇವರ ಮಗಳು ಸಮನ್ವಿತಾ, ತಿರುಮೇಶ್ವರ ಗೌಡ ಇವರ ಮಗಳು ಧರಣಿ, ಬಾಲಕೃಷ್ಣ ಇವರ ಮಗಳು ವೀಕ್ಷಾ .ಎಂ, ಭಾರತಿ ಇವರ ಮಗ ಕೌಶಿಕ್ ಸಂಘದ ಅಧ್ಯಕ್ಷರು ಸನ್ಮಾನಿಸಿದರು

ಸಂಘದ ಸಹಾಯಕಿ ಸುಮಾ.ಕೆ ಪ್ರಾರ್ಥಿಸಿದರು. ನಿರ್ದೇಶಕ ಮುರಳೀಕೃಷ್ಣ ಸ್ವಾಗತಿಸಿದರು, ಕಾರ್ಯದರ್ಶಿ ಹರ್ಷಿತ್.ಕೆ ವಾರ್ಷಿಕ ವರದಿಯನ್ನು ವಾಚಿಸಿ, ನಿರ್ದೆಶಕರಾದ ಧನಂಜಯ ಪೂಜಾರಿ ಸಭೆಯ ನೋಟಿಸ್, ನಿರ್ದೆಶಕರಾದ ಕರುಣಾಕರ ಇವರು ವಂದಿಸಿದರು. ಪರೀಕ್ಷಕಿ ವಿಜಯಕುಮಾರಿ, ಸಹಾಯಕಿ ಸವಿತಾ ಹಾಗೂ ಸಂಘದ ಸದಸ್ಯರು ಸಹಕರಿಸಿದರು.ಪ್ರಭಾಕರ ರೈ ನಿರೂಪಿಸಿದರು.

LEAVE A REPLY

Please enter your comment!
Please enter your name here