ಮಾನಸ ಗಂಗಾ ಸಹಕಾರ ಸಂಘದ ಮಹಾಸಭೆ

0

ರೂ.33,87,634.25 ಲಾಭ – ಸದಸ್ಯರಿಗೆ ಶೇ.12 ಡಿವಿಡೆಂಡ್

ಪುತ್ತೂರು: ಮಾನಸ ಗಂಗಾ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ರೂ.33,87,634.25 ಲಾಭಗಳಿಸಿ ಸದಸ್ಯರಿಗೆ ಶೇ.12 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಕೆ. ರವರು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು. ಸಭೆಯು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 3125ಮಂದಿ ಸದಸ್ಯರಿದ್ದು ರೂ.62,79,469 ಪಾಲು ಬಂಡವಾಳವಿದೆ. ಒಟ್ಟುರೂ.33,87,634.25 ಲಾಭಗಳಿಸಿದೆ. ಸಂಘವು ಕಳೆದ ಹಲವಾರು ವರುಷಗಳಿಂದ ಲೆಕ್ಕ ಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷೆ ಅಮೃತಾ ಜಿ. ನಾಯ್ಕ್, ನಿರ್ದೇಶಕರಾದ ಉದಯಕುಮಾ‌ರ್ ನಾಯ್ಕ್, ಆಶಾಲತಾ, ಗೀತಾ ಎಂ. ನಾಯ್ಕ್, ಕುಸುಮಾ ಕೆ., ನೀತಾ ಎನ್, ರಾಜೇಶ್ವರಿ ಬಿ.ಆರ್., ಶಕೀಲ, ವಿಮಲ ಎನ್. ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸಿಬ್ಬಂದಿ ದಿವ್ಯ ಪ್ರಾರ್ಥಿಸಿದರು.ಸಿಬ್ಬಂದಿ ದಿನೇಶ್ ಕುಮಾರ್ ಕೆ.ಸಿ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಎನ್ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಸುಭಾಶ್ಚಂದ್ರ ವರದಿ ವಾಚಿಸಿದರು.ಮಲ್ಲಿಕಾ‌ಲತ ವಂದಿಸಿದರು.ಸಾತ್ವಿಕ್ ಎಸ್ ಹಾಗೂ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.ಸುಶ್ಮಿತಾ, ಕಾವ್ಯ, ಕಿರಣ್, ಶ್ವೇತ್ ಕುಮಾರ್, ಸುವಿಕ್ಷಾ, ಪ್ರಜ್ವಲ್,ದಿಶಾಲ್ , ಪ್ರವೀಣ್, ವಿನೋದ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.

.

LEAVE A REPLY

Please enter your comment!
Please enter your name here