







ನೆಲ್ಯಾಡಿ: ಸವಾರನ ನಿಯಂತ್ರಣ ತಪ್ಪಿ ಬೈಕ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಸೆ.20ರಂದು ಸಂಜೆ ನಡೆದಿದೆ.


ಉಪ್ಪಾರಪಳಿಕೆ ನಿವಾಸಿ ಚೇತನ ಕೆ. ಗಾಯಗೊಂಡ ಬೈಕ್ ಸವಾರ. ಹುಸೈನ್ ಸಾಬ್ ಎಂಬವರು ಲಾರಿಯಲ್ಲಿ ಕಲ್ಲಿದ್ದಲು ತುಂಬಿಸಿಕೊಂಡು ಸಕಲೇಶಪುರ-ಹಾಸನ ಮಾರ್ಗವಾಗಿ ಬಳ್ಳಾರಿಗೆ ಹೋಗುತ್ತಿದ್ದು ಗುಂಡ್ಯ ತಿರುವು ತಲುಪುತ್ತಿದ್ದಂತೆ ಎದುರಿನಿಂದ ಉಪ್ಪಾರಪಳಿಕೆ ನಿವಾಸಿ ಚೇತನ ಕೆ.ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದು ರಸ್ತೆಯಲ್ಲಿ ಎಳೆಯುತ್ತಾ ಬಂದು ಲಾರಿಗೆ ಡಿಕ್ಕಿಯಾಗಿದೆ.



ಈ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಚೇತನ ಅವರನ್ನು ಲಾರಿ ಚಾಲಕ ಹಾಗೂ ಸ್ಥಳೀಯರು ಉಪಚರಿಸಿ ಬಳಿಕ ಆಂಬುಲೆನ್ಸ್‌ನಲ್ಲಿ ನೆಲ್ಯಾಡಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಕುರಿತು ಲಾರಿ ಚಾಲಕ ಧಾರವಾಡ ನಿವಾಸಿ ಹುಸೈನ್ ಸಾಬ್ ಅಲಿ ಸಾಬ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










