







ಬಡಗನ್ನೂರು : ನೆಟ್ಟಣಿಗೆ ಮೂಡ್ನೂರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ 400ಮೀ ಬಾಲಕರ ವಿಭಾಗದಲ್ಲಿ ಎಂಟನೇ ತರಗತಿ ತೇಜಸ್ ಎಲ್ ಕೆ ಪ್ರಥಮ ಹಾಗೂ 400ಮೀ ಬಾಲಕಿಯರ ವಿಭಾಗದಲ್ಲಿ ಯಶಸ್ವಿನಿ ಡಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.



ತೇಜಸ್ ಎಲ್ ಕೆ ಇವರು ಅರಿಯಡ್ಕ ಗ್ರಾಮದ ಕುರಿಂಜ ಕೆ ಲಿಂಗಪ್ಪ & ಶಾಲಾ ಎಸ್ ಡಿ. ಯಂ. ಸಿ ಉಪಾಧ್ಯಕ್ಷೆ ರಾಜೇಶ್ವರಿ ಡಿ ರವರ ಪುತ್ರ ಹಾಗೂ ಯಶಸ್ವಿನಿ ಇವರು ದರ್ಬೆತ್ತಡ್ಕ ಚಂದ್ರಶೇಖರ ಡಿ ಹಾಗೂ ಅಜಲಡ್ಕ ಅಂಗನವಾಡಿ ಸಹಾಯಕಿ ಕೆ ನಳಿನಿ ರವರ ಪುತ್ರಿ.



ಶಿಕ್ಷಕರ ಮಾರ್ಗದರ್ಶನ ಹಾಗೂ ಮನೆಯವರ ಪ್ರೋತ್ಸಾಹದಿಂದ ಈ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಶಿಕ್ಷಕರು, ಎಸ್ ಡಿ. ಯಂ. ಸಿ ಪದಾಧಿಕಾರಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.










