







ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಆಡಳಿತ ದಕ್ಷಿಣ ಕನ್ನಡ, ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಡಕಾರಂದೂರು ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14ರ ವಯೋಮಾನದ ಕಬಡ್ಡಿ ಪಂದ್ಯಾಟದ ಬಾಲಕಿಯರ ವಿಭಾಗದ ಪಂದ್ಯಾಟದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ಸತತ 8ನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಎಂಟು ತಾಲೂಕುಗಳಿಂದ ಆಗಮಿಸಿದ್ದ ಬಲಿಷ್ಠ ತಂಡಗಳ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಈ ಪೈಕಿ ಲಿಟ್ಲ್ ಫ್ಲವರ್ ಶಾಲಾ ತಂಡದಲ್ಲಿ ಆರನೇ ತರಗತಿ ವಿದ್ಯಾರ್ಥಿಗಳ ತಂಡವು ಇತರ ತಂಡಗಳಲ್ಲಿದ್ದ ಎಂಟನೇ ತರಗತಿಯ ವಿ ದ್ಯಾರ್ಥಿಗಳ ಜೊತೆಗೆ ಸೆನಸಾಡಿ ಎಲ್ಲಾ ಪಂದ್ಯದಲ್ಲಿಯೂ ಅದ್ಬುತ ಪ್ರದರ್ಶನ ನೀಡಿ ಎದುರಾಳಿ ತಂಡದೊಂದಿಗೆ ಗರಿಷ್ಟ ಅಂತರಗಳ ಅಂಕದೊಂದಿಗೆ ವಿಜಯಿಯಾಗಿ ಚಾಂಪಿಯನ್ ಅನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.



ತಂಡದಲ್ಲಿ ವಿದ್ಯಾರ್ಥಿಗಳಾದ ಉಮ್ಮುನಿಧಾ, ಉದ್ವಿತಾ, ರಕ್ಷಾ, ಶೃಜ್ಞಾ ಪಿ ಆಳ್ವ, ಖುಶಿ, ಯಶಸ್ವಿ ಪಿ.ಯು., ಆರ್ ಪರಿಣಿತ, ಪ್ರಣಮ್ಯ ರೈ, ಹರ್ಷಿತ ವೆಂಕಟೇಶ್ ಬುರುಡಿ, ತನ್ವಿಕಾ,ಇಂಚರ,ದೃತಿ ಕೆ ,ಚೈತಾಲಿ ಯಂ ಭಾಗವಹಿಸಿದ್ದರು. ಈ ಪೈಕಿ ಉಮ್ಮು ನಿಧಾ ಸವ್ಯಸಾಚಿ ಆಟಗಾರ್ತಿ ಹಾಗೂ ದಿಶಾ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.










