







ಅಧ್ಯಕ್ಷ: ಮಂಜುನಾಥ್ ಎಮ್, ಪ್ರ.ಕಾರ್ಯದರ್ಶಿ: ಪುರಂದರ್ ಪಡೀಲ್, ಖಜಾಂಚಿ: ರಮೇಶ್ ಬಿ.


ಪುತ್ತೂರು: ಪಡೀಲ್ ಚೈತನ್ಯ ಮಿತ್ರವೃಂದದ ೩೪ನೇ ವಾರ್ಷಿಕ ಮಹಾಸಭೆ ಅಧ್ಯಕ್ಷರಾದ ಮಂಜುನಾಥ್ ಎಮ್.ರವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಛೇರಿಯಲ್ಲಿ ನಡೆಯಿತು. ಸಂಸ್ಥೆಯ ಹಿರಿಯ ಸದಸ್ಯ ಭವಾನಿ ಶಂಕರ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಚಾಲಕರಾದ ಸಂಪತ್ ಕುಮಾರ್ ಜೈನ್ ಮಾತನಾಡಿದರು. ಕಾರ್ಯದರ್ಶಿ ಪುರಂದರ್ ಪಡೀಲ್ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಗಣೇಶ್ ಬದಿನಾರ್ ಲೆಕ್ಕಪತ್ರ ಮಂಡಿಸಿದರು. ಅಗಲಿದ ಸಂಸ್ಥೆಯ ಸದಸ್ಯರಿಗೆ, ದೀಪ ನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.



ನೂತನ ಪದಾಧಿಕಾರಿಗಳ ಆಯ್ಕೆ:
ಸಂಸ್ಥೆಯ 2026-27ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಂಜುನಾಥ್ ಎಮ್, ಪ್ರಧಾನ ಕಾರ್ಯದರ್ಶಿಯಾಗಿ ಪುರಂದರ್ ಪಡೀಲ್, ಉಪಾಧ್ಯಕ್ಷರಾಗಿ ಗಣೇಶ್ ಬದಿನಾರ್, ಜತೆ ಕಾರ್ಯದರ್ಶಿಯಾಗಿ ಗಣೇಶ್ ಬಿ, ಹಾಗೂ ಖಜಾಂಚಿಯಾಗಿ ರಮೇಶ್ ಬಿ. ರವರನ್ನು ಆಯ್ಕೆ ಮಾಡಲಾಯಿತು. ಗಣೇಶ್ ಎನ್.ರವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಚಾಲಕರಾದ ಸಂಪತ್ ಕುಮಾರ್ ಜೈನ್ ನೂತನ ಸಮಿತಿಗೆ ಪ್ರಮಾಣ ವಚನ ಬೋಧಿಸಿದರು. ಗಣೇಶ್ ಬಿ. ಪ್ರಾರ್ಥಿಸಿ ಗಣೇಶ್ ಬದಿನಾರ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಗಣೇಶ್ ಬಿ ವಂದಿಸಿದರು. ಚಂದ್ರಶೇಖರ್ ಪಿ. ಕಾರ್ಯಕ್ರಮ ನಿರೂಪಿಸಿದರು.










