ಸೈಂಟ್ ಕ್ರಿಸ್ಟೋಫರ್ ಅಸೋಸಿಯೇಷನ್ : ಅಧ್ಯಕ್ಷ:ಅರುಣ್ ರೆಬೆಲ್ಲೋ, ಕಾರ್ಯದರ್ಶಿ:ಜೆನಿಫರ್ ಮಸ್ಕರೇನ್ಹಸ್, ಕೋಶಾಧಿಕಾರಿ: ರೋಹನ್ ಡಾಯಸ್

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿನ ಸೈಂಟ್ ಕ್ರಿಸ್ಟೋಫರ್ ಅಸೋಸಿಯೇಷನ್ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ನಿರ್ದೇಶಕರಾದ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಡಾ|ಜೆ.ಬಿ ಸಲ್ದಾನ್ಹಾರವರ ಮಾರ್ಗದರ್ಶನದಲ್ಲಿ ಈಗಾಗಲೇ ನೆರವೇರಿದ್ದು ಇದರ ಹಸ್ತಾಂತರ ಕಾರ್ಯ ಇತ್ತೀಚೆಗೆ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಸಭಾಂಗಣದಲ್ಲಿ ನೆರವೇರಿತು.

ನೂತನ ಅಧ್ಯಕ್ಷರಾಗಿ ಅರುಣ್ ರೆಬೆಲ್ಲೋ ದರ್ಬೆ, ಕಾರ್ಯದರ್ಶಿಯಾಗಿ ಜೆನಿಫರ್ ನಿಶಾ ಮಸ್ಕರೇನ್ಹಸ್ ಎಪಿಎಂಸಿ ರಸ್ತೆ(ಮರು ಆಯ್ಕೆ), ಕೋಶಾಧಿಕಾರಿಯಾಗಿ ರೋಹನ್ ವಿಲ್ಸನ್ ಡಾಯಸ್ ಕಲ್ಲಿಮಾರು(ಮರು ಆಯ್ಕೆ) ಆಯ್ಕೆಯಾಗಿದ್ದಾರೆ. ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮನೋಜ್ ಝೇವಿಯರ್ ಡಾಯಸ್ ಎಪಿಎಂಸಿ ರಸ್ತೆ, ರೋಶನ್ ಡಾಯಸ್ ಬಪ್ಪಳಿಗೆ, ರಾಜೇಶ್ ಮಸ್ಕರೇನ್ಹಸ್ ಪರ್ಲಡ್ಕ, ಫೆಬಿಯನ್ ಗೋವಿಯಸ್ ದರ್ಬೆ, ಅನಿಲ್ ಪಾಯಿಸ್ ಸಾಮೆತ್ತಡ್ಕ, ವಲೇರಿಯನ್ ಡಾಯಸ್ ಎಪಿಎಂಸಿ ರಸ್ತೆ, ಪತ್ರಕರ್ತ ಸಂತೋಷ್ ಮೊರಾಸ್ ಮೊಟ್ಟೆತ್ತಡ್ಕರವರು ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಪರಿಚಯ:
ನೂತನ ಪದಾಧಿಕಾರಿಗಳಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್ ರೆಬೆಲ್ಲೋರವರು ಮಾಯಿದೆ ದೇವುಸ್ ಚರ್ಚ್ ಡೊನ್ ಬೊಸ್ಕೊ ಕ್ಲಬ್ ನ ಅಧ್ಯಕ್ಷರಾಗಿ, ಸಂತ ವಿನ್ಸೆಂಟ್ ದೇ ಪಾವ್ಲ್ ಸಭಾದ ಅಧ್ಯಕ್ಷರಾಗಿ ಅನುಭವ ಹೊಂದಿದವರರಾಗಿದ್ದು, ಇವರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಡಳಿತ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದ ಜೆನಿಫರ್ ನಿಶಾ ಮಸ್ಕರೇನ್ಹಸ್ ರವರು ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಶಾಧಿಕಾರಿಯಾಗಿ ಮರು ಆಯ್ಕೆಯಾದ ಉದ್ಯಮಿ ರೋವ್ ಎಂಟರ್ಪ್ರೈಸ್ ಮಂಗಳೂರು ಇದರ ರೋಹನ್ ಡಾಯಸ್ ರವರು ಡೊನ್ ಬೊಸ್ಕೊ ಕ್ಲಬ್ ಸದಸ್ಯರಾಗಿದ್ದು, ಡೊನ್ ಬೊಸ್ಕೊ ಕ್ಲಬ್ ವರ್ಷಂಪ್ರತಿ ನಡೆಸುವ ಸಿಪಿಎಲ್ ಕ್ರಿಕೆಟ್ ಲೀಗ್ ಸದಸ್ಯರೂ ಆಗಿರುತ್ತಾರೆ.

ಅಧಿಕಾರ ಹಸ್ತಾಂತರ..
ಸರಳವಾಗಿ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಕ್ರಿಸ್ಟೋಫರ್ ಅಸೋಸಿಯೇಷನ್ ಪುತ್ತೂರು ತಾಲೂಕು ಇದರ ಹಿರಿಯ ಸದಸ್ಯರಾದ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕಾ ನಿರ್ದೇಶಕ ವಲೇರಿಯನ್ ಡಾಯಸ್ ರವರು ನೂತನ ಅಧ್ಯಕ್ಷ ಅರುಣ್ ರೆಬೆಲ್ಲೋರವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.


ಕ್ರಿಸ್ಟೋಫರ್ ಆಂಬುಲೆನ್ಸ್..
2021ರಲ್ಲಿ ಪುತ್ತೂರು ಹಾಗೂ ಆಸುಪಾಸಿನ ಚರ್ಚ್ ಗಳಲ್ಲಿನ ಮರಣ ಹೊಂದಿದವರನ್ನು ದಫನ ಭೂಮಿಯತ್ತ ಕೊಂಡೊಯ್ಯಲು ಹಾಗೂ ಅಸೌಖ್ಯದಲ್ಲಿರುವವರನ್ನು ಆಸ್ಪತ್ರೆಗೆ ದಾಖಲಿಸಲು ಸೇವೆಯ(ಕಡಿಮೆ ದರದಲ್ಲಿ/ಬಡತನದಲ್ಲಿರುವವರಿಗೆ ಉಚಿತವಾಗಿ) ರೂಪದಲ್ಲಿ ಈ ಕ್ರಿಸ್ಟೋಫರ್ ಆಂಬುಲೆನ್ಸ್ ಹುಟ್ಟಿಕೊಂಡಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

LEAVE A REPLY

Please enter your comment!
Please enter your name here