ನಿವೃತ್ತ ಶಿಕ್ಷಕ ಚಿನ್ನಪ್ಪ ಗೌಡ ನೆಕ್ಕಿಲಾಡಿಗುತ್ತು ನಿಧನ

0


ಪುತ್ತೂರು: 34 ನೆಕ್ಕಿಲಾಡಿಯ ನೆಕ್ಕಿಲಾಡಿ ಗುತ್ತು ಮನೆಯ ನಾಟಿ ವೈದ್ಯರಾಗಿ ಪ್ರಸಿದ್ಧಿ ಪಡೆದ & ನಿವೃತ ಶಿಕ್ಷಕರಾದ ಚಿನ್ನಪ್ಪ ಗೌಡ (92) ವಯೋಸಹಜ ಕಾಯಿಲೆಯಿಂದ ಸೆ.23ರಂದು ಬೆಳಗ್ಗೆ ನಿಧನರಾದರು.


ಶಿಕ್ಷಕರಾಗಿ ಇವರು ಕುಂದಾಪುರ, ಕೋಡಿಂಬಾಡಿ, ಬೆಳ್ಳಿಪ್ಪಾಡಿ ಹಾಗೂ ಸುಳ್ಳದ ನಾರ್ಕೋಜಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ತನ್ನ ಸರಕಾರಿ ಸೇವೆಯೊಂದಿಗೆ ನಾಟಿ ವೈದ್ಯರಾಗಿ ಪ್ರಸಿದ್ಧ ಹೊಂದಿದ್ದ ಇವರು ಹಾವು ಕಡಿತ, ಕೆಂಪು ರೋಗ ಸೇರಿದಂತೆ ಹಲವಾರು ರೋಗಗಳಿಗೆ ಮದ್ದು ನೀಡಿ ಹಲವರನ್ನು ಗುಣಪಡಿಸಿ ಅವರ ಪಾಲಿಗೆ ಆಪ್ಭಾಂಧವ ಎನಿಸಿಕೊಂಡಿದ್ದರು. ಇವರಲ್ಲಿದ್ದ ನಾಟಿ ವೈದ್ಯಕೀಯ ವಿದ್ವಾಂಸಕ್ಕೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.


ಮೃತರು ಪತ್ನಿ ಚಿನ್ನಮ್ಮ, ಪುತ್ತರಾದ ಉಮಾನಾಥ, ನಿವೃತ ಪ್ರಾಂಶುಪಾಲ ಸುಬ್ತಹ್ಮಣ್ಯ ಗೌಡ, ಪುತ್ರಿ ಕೋಮಲಾ, ಸೊಸೆಯಂದಿರಾದ ಪ್ರೇಮಾ, ಸುನೀತ, ಅಳಿಯ ಗಣಪಯ್ಯ ಸೇರಿದಂತೆ ಮರಿ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here