







ನೆಲ್ಯಾಡಿ: ನೆಲ್ಯಾಡಿ ಗ್ರಾಮದ ತೋಟದಮನೆ ನಿವಾಸಿ, ನಿವೃತ್ತ ಉಪ ತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿ (68ವ.) ಅವರು ಸೆ. 23 ರಂದು ಮುಂಜಾನೆ ಸ್ವ ಗೃಹದಲ್ಲಿ ನಿಧನರಾದರು. ಇವರು ಕೆಲ ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನೆಲ್ಯಾಡಿ ಪೇಟೆಯಲ್ಲಿ ಕಪಿಲಾ ಸಂಕೀರ್ಣ ಹೊಂದಿದ್ದ ಇವರು ಅಲ್ಲೇ ವಾಸ್ತವ್ಯವಿದ್ದರು.


ಗುಡ್ಡಪ್ಪ ಶೆಟ್ಟಿ ಅವರು ತನ್ನ 19ನೇ ವಯಸ್ಸಿನಲ್ಲೇ ಗ್ರಾಮಕರಣಿಕರಾಗಿ ಸೇವೆ ಆರಂಭಿಸಿದ್ದು ಬಳಿಕ ಕಂದಾಯ ನಿರೀಕ್ಷಕರಾಗಿ, ಉಪ ತಹಶೀಲ್ದಾರ್ ಆಗಿ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು. ಇವರು ನೆಲ್ಯಾಡಿ ವಲಯ ಬಂಟರ ಸಂಘದ ಸ್ಥಾಪಕ ಕಾರ್ಯದರ್ಶಿ ಯಾಗಿ, ಆ ಬಳಿಕ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.



ಮೃತರು ಪತ್ನಿ ಶ್ಯಾಮಲಾ ಜಿ ಬೋಳೋಡಿಗುತ್ತು, ಪುತ್ರಿಯರಾದ ಮೆಸ್ಕಾಂ ಕಾರ್ಕಳ ಶಾಖೆಯಲ್ಲಿ ಎಇಇ ಆಗಿರುವ ಶಿಲ್ಪಾ, ಶ್ರುತಿ, ಅಳಿಯಂದಿರಾದ ಸುಧೇಶ್ ಶೆಟ್ಟಿ, ಡಾ. ಶಿವಪ್ರಸಾದ್, ಮೊಮ್ಮಕ್ಕಳಾದ ಶ್ರೀದಾ, ಶಾಘ್ವಿ, ಶಾಷ್ಣಿ ಅವರನ್ನು ಅಗಲಿದ್ದಾರೆ. ಗುಡ್ಡಪ್ಪ ಶೆಟ್ಟಿ ಅವರ ನಿಧನಕ್ಕೆ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಶ್ರೀ ಮಾತಾ ಹಾಗೂ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.










