ನೆಟ್ಟಣಿಗೆ ಮೂಡ್ನೂರು ಗ್ರಾ.ಪಂ ವಠಾರದಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ

0

ಬಡಗನ್ನೂರುಃ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಈಶ್ವರಮಂಗಲ ಹಾಗೂ ಗ್ರಾಮಪಂಚಾಯತ್ ನೆಟ್ಟಣಿಗೆ ಮೂಡ್ನೂರು ಇವುಗಳ ಜಂಟಿ ಆಶ್ರಯದಲ್ಲಿ ಸಾಕುನಾಯಿಗಳಿಗೆ ಉಚಿತ ರೋಗನಿರೋದಕ (ರೇಬಿಸ್ )ಲಸಿಕಾ  ಕಾರ್ಯಕ್ರಮವು  ಸೆ. 23 ರಂದು ನೆಟ್ಟಣಿಗೆ ಮೂಡ್ನೂರು ಗ್ರಾ. ಪಂ ವಠಾರದಲ್ಲಿ ನಡೆಯಿತು.

 ಈಶ್ವರಮಂಗಲ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ  ಹಿರಿಯ ಪಶು ವೈದ್ಯಾಕೀಯ ಪರೀಕ್ಷಕ ಬಸವರಾಜ್ ನಾಯಿಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. , ಕಿರಿಯ  ಪಶು  ಪರೀಕ್ಷಕ ರೋಹಿತ್ ಕೆದಂಬಾಡಿ,,ಡಿ ಗ್ರೂಪ್ ನೌಕರರಾದ ಸರೋಜ, ಈಶ್ವರಮಂಗಲ,ಅರುಣಾ ಕೇದಂಬಾಡಿ, ಸುನಿಲ್ ಕೊಳ್ತಿಗೆ, ಪ್ರದೀಪ್ ಪಾಣಾಜೆ, ಪಶುಸಕಿಯರಾದ ಕಾವ್ಯ ಹಾಗೂ ರತ್ನವತಿ ರವರು ಭಾಗವಹಿಸಿದರು.. ಗ್ರಾಮ ಪಂಚಾಯತ್  ಪಿ ಡಿ ಓ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾ. ಪಂ ವ್ಯಾಪ್ತಿಯ ಸುಮಾರು  380 ಸಾಕು ನಾಯಿಗಳಿಗೆ ಹಾಗೂ 12 ಬೆಕ್ಕುಗಳಿಗೆ ಲಸಿಕೆ ನೀಡಲಾಯಿತು.

LEAVE A REPLY

Please enter your comment!
Please enter your name here