ಆಲಂಕಾರು ಎಸ್.ಸಿ. ಡಿ.ಸಿ.ಸಿ ಬ್ಯಾಂಕ್ ಶಾಖೆಯಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ವಿಮಾ ಮೊತ್ತ ವಿತರಣೆ

0

ಆಲಂಕಾರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಲಂಕಾರು ಶಾಖೆಯ ಗ್ರಾಹಕರಾದ ಹಳೆನೇರೆಂಕಿ ಗ್ರಾಮದ ಬರೆಂಬೆಟ್ಟು ನಿವಾಸಿಯಾದ ಆನಂದ ಬಿ ಯವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ವಿಮೆ ಯೋಜನೆಯಡಿ ನೋಂದಾಯಿಸಿದ್ದು ಇತ್ತೀಚೆಗೆ ಇವರು ಹೃದಯಾಘಾತದಿಂದ ನಿಧನರಾಗಿದ್ದರು.

ಈ ಯೋಜನೆಯ ಪರಿಹಾರ ಮೊತ್ತ ರೂ.2,00,000/-ವನ್ನು ಇವರ ಪತ್ನಿಯಾದ ಸತ್ಯವತಿಯವರಿಗೆ ಸೆ.23 ರಂದು ಆಲಂಕಾರು ಎಸ್.ಸಿ ಡಿ.ಸಿ.ಸಿ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಹಿರಿಯ ಶಾಖಾ ನೀರಿಕ್ಷಕರಾದ ಹುಕ್ರಪ್ಪ,ಎಂ, ಬ್ಯಾಂಕ್ ವ್ಯವಸ್ಥಾಪಕರಾದ ದೀಪಾ.ಡಿ ಮತ್ತು ಸಿಬ್ಬಂದಿಗಳು ವಿಮಾ ಮೊತ್ತದ ಚೆಕ್ಕ್ ನ್ನು ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here