ಮೈಸೂರು ಕಂಬಳದ ಸಮಾಲೋಚನಾ ಸಭೆ

0

ಪುತ್ತೂರು: ಮೈಸೂರು ದಸರಾದಲ್ಲಿ ಹೊಸತಾಗಿ ಸೇರ್ಪಡೆಯಾಗಲಿರುವ ಕಂಬಳ ಕ್ರೀಡೆಯ ಕೆಲಸಗಳ ಪ್ರಗತಿಯ ಬಗ್ಗೆ ಮೈಸೂರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಮಾಲೋಚನೆ ಸಭೆ ನಡೆಯಿತು.

ಕಂಬಳ ಆಯೋಜನೆಯ ಸ್ಥಳದಲ್ಲಿ ನಡೆದಿರುವ ಸಿದ್ಧತೆ ಹಾಗೂ ಮುಂದೆ ನಡೆಯುವ ಕೆಲಸಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಮೈಸೂರು ದಸರಾ ಕಂಬಳ ಸಮಿತಿಯ ಪದಾಧಿಕಾರಿ ಎ. ಮುರಳೀಧರ ರೈ ಮಠಂತಬೆಟ್ಟು ಕಂಬಳ ಹೇಗೆ ನಡೆಯುತ್ತದೆ ಹಾಗೂ ಆಯೋಜನೆಯ ಸಿದ್ಧತೆ ಹೇಗಿರಬೇಕು ಎಂದು ಸಲಹೆ ಸೂಚನೆ ನೀಡಿದರು.



ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ದೂರವಾಣಿ  ಮೂಲಕ ಸಲಹೆ ನೀಡಿದರು. ಮೈಸೂರು ಕಂಬಳ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಶುಕ್ರವಾರ ಮಂಗಳೂರಿನಲ್ಲಿ ಅಧಿಕಾರಿಗಳ ಸಮಿತಿ ಹಾಗೂ ಕಂಬಳ ಸಮಿತಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಬೀಮಪ್ಪ ಕೆ.ಲಾಳಿ, ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮೈತ್ರಿ,  ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಪದ್ಮನಾಭ್, ನಿರ್ಮಿತಿ ಕೇಂದ್ರದ ಮಹೇಶ್ ಕುಮಾರ್, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಾದ ಡಾ. ನಂಜೇಶ್, ಡಾ. ಸಿದ್ದರಾಜ್, ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here