ಸರಸ್ವತಿ ಗುಡ್ಡಪ್ಪ ಶೆಟ್ಟಿ ಅವರಿಗೆ ಬಂಟರ ಸಂಘ ಮತ್ತು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ನೂತನ ಮನೆ ಹಸ್ತಾಂತರ

0

ಆಲಂಕಾರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಬಂಟರ ಸಂಘ, ಆಲಂಕಾರು ವಲಯ ಬಂಟರ ಸಂಘ ಮತ್ತು ರಾಮಕುಂಜ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ರಾಮಕುಂಜ ಗ್ರಾಮದ ಮಾರಂಗದಲ್ಲಿ ಸರಸ್ವತಿ ಗುಡ್ಡಪ್ಪ ಶೆಟ್ಟಿ ಅವರಿಗೆ ನಿರ್ಮಿಸಿದ ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಯವರು ಅಂದಾಜು 4 ಲಕ್ಷ ವೆಚದಲ್ಲಿ ನಿರ್ಮಣ ಗೊಂಡ ಮನೆಯ ಕೀ ಯನ್ನು ಹಸ್ತಾಂತರಿಸಿ ಮಾತನಾಡಿ, ಕಷ್ಟದಲ್ಲಿರುವವರಿಗೆ ಸ್ಪಂದನೆ ನೀಡುವುದು ಅದು ದೇವರ ಕೆಲಸ. ಬಂಟರು ಸ್ವಾಭಿಮಾನಿಗಳು, ತಮ್ಮ ಕಷ್ಟ ಮತ್ತು ಸಮಸ್ಯೆಗಳನ್ನು ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಅವರು ಮನೆ ನಿರ್ಮಾಣದ ವಿಷಯವನ್ನು ತಾಲೂಕು ಬಂಟರ ಸಂಘದಲ್ಲಿ ಪ್ರಸ್ತಾಪಿಸಿದಾಗ ಎಲ್ಲರೂ ಬೆಂಬಲ ಸೂಚಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಬಂಟರ ಸಂಘ ಮತ್ತು ಆಲಂಕಾರು ವಲಯ ಬಂಟರ ಸಂಘದ ಸಹಕಾರದೊಂದಿಗೆ ಮನೆ ನಿರ್ಮಾಣ ಮಾಡಲಾಗಿದೆ ಎಂದರು.ಅ.3 ರಂದು ಪುತ್ತೂರು ತಾಲೂಕು ಬಂಟರ ಭವನದಲ್ಲಿ ನಡೆಯಲಿರುವ ಬಂಟರ ಸೇರಿಗೆ 2026 ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ರಾಮಕುಂಜ ಗ್ರಾಮದ ಮಾರಂಗದಲ್ಲಿ ಸರಸ್ವತಿ ಶೆಟ್ಟಿ ಅವರ ಪತಿ ಅನಾರೋಗ್ಯದಿಂದಿದ್ದು, ಮಗಳು ಬುದ್ಧಿಮಾಂದ್ಯಳಾಗಿದ್ದ ವಿಷಯವನ್ನು ಊರವರು ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಅವರ ಗಮನಕ್ಕೆ ತಂದಿದ್ದರು.ಬಳಿಕ ದಯಾನಂದ ರೈ ಮನವಳಿಕೆಗುತ್ತು ಅವರು ಮನೆ ನಿರ್ಮಾಣದ ನೇತೃತ್ವದ ಜವಾಬ್ದಾರಿ ವಹಿಸಿಕೊಂಡು ಕಾಮಗಾರಿಯನ್ನು ಸುಸೂತ್ರವಾಗಿ ನಡೆಸಿದ್ದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿ ಈವರೆಗೆ ಎರಡು ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದ್ದೇವೆ. ಮೊದಲ ಮನೆಯನ್ನು ಕೊಯಿಲ ಗ್ರಾಮದ ಕಲ್ಕಾಡಿಯಲ್ಲಿ, ಎರಡನೇ ಮನೆಯನ್ನು ರಾಮಕುಂಜ ಗ್ರಾಮದ ಮಾರಂಗದಲ್ಲಿ ಎಲ್ಲರ ಸಹಕಾರದೊಂದಿಗೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ರಾಮಕುಂಜ ಗ್ರಾ.ಪಂ ನಿಂದ 77,298 ಬಂಟರ ಯಾನೆ ನಾಡವರ ಮಾತೃಸಂಘ ಪುತ್ತೂರು ತಾಲೂಕು ಸಮಿತಿಯಿಂದ 35,000,ಬಂಟರ ಸಂಘ ಪುತ್ತೂರು ತಾಲೂಕುನಿಂದ 35,000, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಯವರು 5,000, ದಯಾನಂದ ರೈ ಮನವಳಿಕೆಗುತ್ತು 36,200,ಸದಾಶಿವ ಶೆಟ್ಟಿ ಮಾರಂಗ 31,000,ರಾಧಾಕೃಷ್ಣ ರೈ ಪರಾರಿಗುತ್ತು 24,000, ರಾಜೇಶ್ ಶೆಟ್ಟಿ ಸಂಪ್ಯಾಡಿ 13,000 ,ವಿನೋದ ಕುಮಾರ್ ರೈ ಮನವಳಿಕೆಗುತ್ತು 11,000,ಪ್ರಕಾಶ್ ಶೆಟ್ಟಿ ಬಂಜರ ಮಂಗಳೂರು 10,000, ಪದ್ಮನಾಭ ಪೂಂಜ ಮುಂಬಯಿ 10,000,ಆಲಂಕಾರು ವಲಯ ಬಂಟರ ಸಂಘ 10,000 ,ಲಯನ್ಸ್ ಕ್ಲಬ್ ದುರ್ಗಾಂಬಾ ಆಲಂಕಾರು 6000 ಗಣೇಶ್ ರೈ ಮನವಳಿಕೆಗುತ್ತು 6000,ಸುರೇಶ ಕುಂಟುಪುಣಿಗುತ್ತು 6000, ದಿನಕರ ರೈ ಆರುವಾರ ಬಾಳಿಕೆ ವಕೀಲರು ಪುತ್ತೂರು 5000, ಜಯರಾಮ ರೈ ಮಿತ್ರಂಪಾಡಿ 5,000, ಲೋಕನಾಥ ರೈ ಕೇಲ್ಕ ರಾಮಕುಂಜ 5000, ರವಿರಾಜ್ ರೈ ಗುತ್ತುಪಾಲು 5000,ಗಣೇಶ್ ರೈ ಬೇಳ್ಪಾಡಿ 5,000,ದಿವಾಕರ ರೈ ಬಟ್ಲಡ್ಕ 5000, ಪ್ರಶಾಂತ ರೈ ಮನವಳಿಕೆಗುತ್ತು 2,200,ತಾರನಾಥ ರೈ ನಗ್ರಿ 2000,ಅರುಣ್ ಕುಮಾರ್ ರೈ ಡಿಂಬ್ರಿ 2,000,ಡಾ!.ಆಶಾ ಎಸ್ ರೈ ಡಿಂಬ್ರಿ 2,000 ತುಕರಾಮ ರೈ ಕುಂಡಾಜೆ 1,000 ,ಶಶಿಧರ ರೈ ಮನವಳಿಕೆಗುತ್ತು 1,000
ಅಜಿತ್ ರೈ ಮನವಳಿಕೆಗುತ್ತು 1,000 ಕಮಲಾಕ್ಷ ರೈ ಪೂಂಜ1,000 ,ವಿಠಲ ರೈ ಮನವಳಿಕೆಗುತ್ತು 1,000 ,ಜಯಪ್ರಕಾಶ್ ರೈ ಮನವಳಿಕೆಗುತ್ತು 1,000 ಈ‌ ಮನೆ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ ಎಂದು ತಿಳಿಸಿ ಶುಭಹಾರೈಸಿದರು.

ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಪ್ರಶಾಂತ ರೈ ಮನವಳಿಕೆಗುತ್ತು, ರಾಮಕುಂಜ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ದೇಣಿಗೆ ನೀಡಿದ ಮಹನೀಯರು ಸೇರಿದಂತೆ ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಆರುವಾರ, ಜಯಪ್ರಕಾಶ್ ರೈ ಪಟ್ಟೆಗುತ್ತು, ಮೋಹನದಾಸ ರೈ ಪರಾರಿಗುತ್ತು, ಸುಧಾಕರ ರೈ ಮನವಳಿಕೆಗುತ್ತು, ರೂಪೇಶ್ ರೈ, ಅಭಿಷೇಕ್ ಶೆಟ್ಟಿ ಪೂಂಜ, ರವೀಂದ್ರ ರೈ ಸುರುಳಿ, ಶಾಂತರಾಮ ಶೆಟ್ಟಿ ಕೆದುಂಬಾಡಿ, ವಿಜಯಲಕ್ಷ್ಮಿ ಶೆಟ್ಟಿ ಕೆದುಂಬಾಡಿ, ಲಕ್ಷ್ಮೀ ಶೆಟ್ಟಿ ಮಾರಂಗ, ರತ್ನಾವತಿ ಮಾರಂಗ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು ವಂದಿಸಿದರು.

LEAVE A REPLY

Please enter your comment!
Please enter your name here