ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಣಬೆ ಕೃಷಿ ಕುರಿತು ಪ್ರಾಯೋಗಿಕ ಕಾರ್ಯಾಗಾರ

0

ಪುತ್ತೂರು, ಸೆ.24: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಇಕೋ ಕ್ಲಬ್‌ನ ವತಿಯಿಂದ ಅಣಬೆ ಕೃಷಿ ತಂತ್ರಜ್ಞಾನ ಕುರಿತ ಪ್ರಾಯೋಗಿಕ ಕಾರ್ಯಾಗಾರವು ಕಾಲೇಜಿನ ಸ್ಪಂದನ ಸೆಮಿನಾರ್ ಹಾಲ್‌ನಲ್ಲಿ ಸೆ.24ರಂದು ನಡೆಯಿತು.

ವಿದ್ಯಾರ್ಥಿಗಳಲ್ಲಿ ಅಣಬೆ ಕೃಷಿಯ ಕುರಿತು ಅರಿವು ಮೂಡಿಸುವುದು ಹಾಗೂ ಈ ಕ್ಷೇತ್ರದಲ್ಲಿನ ಪ್ರಾಯೋಗಿಕ ಕೌಶಲ್ಯ ಮತ್ತು ಉದ್ಯಮಶೀಲತೆಯ ಆಸಕ್ತಿಯನ್ನು ಬೆಳೆಸುವುದು ಕಾರ್ಯಾಗಾರದ ಉದ್ದೇಶವಾಗಿತ್ತು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಮೊಳೆಯಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯದ ನೆಹರು ಸ್ಮಾರಕ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಕುಲದೀಪ್ ಪಿ.ಪಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿ ಶ್ರೀ ಕುಲದೀಪ್ ಪಿ.ಪಿ. ಅವರು ಅಣಬೆ ಕೃಷಿ ತಂತ್ರಜ್ಞಾನದ ಮೂಲಭೂತ ಅಂಶಗಳ ಕುರಿತು ಮಾಹಿತಿಪೂರ್ಣ ಉಪನ್ಯಾಸ ನೀಡಿದರು. ಅಣಬೆ ಉತ್ಪಾದನೆಯ ವಿವಿಧ ಹಂತಗಳಾದ ಸೂಕ್ತ ಆಧಾರ ವಸ್ತುಗಳ ಆಯ್ಕೆ, ಬೆಳೆಯುವ ಮಾಧ್ಯಮದ ತಯಾರಿ ಮತ್ತು ಕ್ರಿಮಿನಾಶಕೀಕರಣ, ಸ್ಪಾನ್‌ ಅಳವಡಿಕೆ, ಸೂಕ್ತ ಪರಿಸರ ಪರಿಸ್ಥಿತಿಗಳ ನಿರ್ವಹಣೆ ಹಾಗೂ ಅಣಬೆಗಳ ಕೊಯ್ಲು ಮೊದಲಾದ ವಿಷಯಗಳನ್ನು ವಿವರಿಸಿದರು.

ಕಾರ್ಯಾಗಾರದ ಪ್ರಮುಖ ಅಂಗವಾಗಿ ಸಸ್ಯಶಾಸ್ತ್ರ ಪ್ರಯೋಗಾಲಯದಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳು ಪ್ರಾಯೋಗಿಕ ಪ್ರದರ್ಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಣಬೆ ಕೃಷಿಯ ವಿವಿಧ ಹಂತಗಳಲ್ಲಿ ನೇರ ಅನುಭವ ಪಡೆದರು. ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು, ಪ್ರಾಯೋಗಿಕ ಕೌಶಲ್ಯ ಹಾಗೂ ಅಣಬೆ ಕೃಷಿಯಲ್ಲಿ ಉದ್ಯಮಶೀಲತೆಯ ಆಸಕ್ತಿಯನ್ನು ಬೆಳೆಸುವಲ್ಲಿ ಪರಿಣಾಮಕಾರಿ ವೇದಿಕೆಯಾಯಿತು.

ಕುಮಾರಿ ನಮ್ರತಾ ಮತ್ತು ಕುಮಾರಿ ಜಶ್ಮಿತಾ ಅವರ ಪ್ರಾರ್ಥಸಿ, III ಬಿ.ಎಸ್ಸಿಯ ಶ್ರೀ ಸಂಭ್ರಮ್ ಅವರು ಸ್ವಾಗತಿಸಿ,III ಬಿ.ಎಸ್ಸಿಯ ಕುಮಾರಿ ದಿಲ್ಶಾನಾ ಅವರು ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶಶಿಪ್ರಭಾ ಬಿ. ಹಾಗೂ ಇಕೋ ಕ್ಲಬ್‌ನ ಸಂಚಾಲಕರಾದ ಶ್ರೀಮತಿ ಸ್ಮಿತಾ ವಿವೇಕ್ ಅವರು ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.

LEAVE A REPLY

Please enter your comment!
Please enter your name here