







ಪುತ್ತೂರು:ಬೈಕ್ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಗಾಯಗೊಂಡ ಘಟನೆ ಪುತ್ತೂರು ಮುಖ್ಯರಸ್ತೆ ಏಳ್ಮುಡಿ ಬಳಿ ನಡೆದಿದೆ.


ನೆಲ್ಲಿಕಟ್ಟೆ ನಿವಾಸಿಯಾಗಿರುವ ಕಡಬ ಮೂಲದ ಧನುಷ್ (22ವ)ಗಾಯಗೊಂಡವರು.ಅವರು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತಿದ್ದ ಸಂದರ್ಭ ಅಕ್ಷಿತ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಧನುಷ್ ಅವರು ಗಾಯಗೊಂಡಿದ್ದು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













