







5.92 ಲಕ್ಷ ರೂ.ನಿವ್ವಳ ಲಾಭ | ಶೇ.15 ಡಿವಿಡೆಂಡ್, ಶೇ.65 ಬೋನಸ್ ಘೋಷಣೆ


ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.24ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.



ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ ಮಾತನಾಡಿ, ವರದಿ ಸಾಲಿನಲ್ಲಿ 1,01,87,750 ರೂ.ಮೌಲ್ಯದ ಹಾಲು ಖರೀದಿ ಮಾಡಲಾಗಿದ್ದು 1,05,735 ರೂ.ಮೌಲ್ಯದ ಹಾಲು ಸ್ಥಳೀಯವಾಗಿ ಹಾಗೂ 2,17,776 ರೂ.ಮೌಲ್ಯದ ಮಾದರಿ ಹಾಲು ಮಾರಾಟ ಮಾಡಲಾಗಿದೆ. ಒಕ್ಕೂಟಕ್ಕೆ 1,08,03,654 ರೂ.ಮೌಲ್ಯದ ಹಾಲು ಮಾರಾಟ ಮಾಡಲಾಗಿದೆ. ಪಶು ಆಹಾರ, ಸೈಲೇಜ್, ಖನಿಜ ಲವಣ ಮಿಶ್ರಣ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ ಸಂಘಕ್ಕೆ 5,92,513 ರೂ.ನಿವ್ವಳ ಲಾಭ ಬಂದಿದ್ದು ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ 65ಶೇ. ಬೋನಸ್ ನೀಡಲಾಗುವುದು ಎಂದು ಹೇಳಿದರು. ಪ್ರಸ್ತುತ ದಿನವಹಿ 750 ಲೀ.ಹಾಲು ಖರೀದಿ ಮಾಡಲಾಗುತ್ತಿದೆ. ಶಿಶಿಲ, ಅರಸಿನಮಕ್ಕಿ, ಎಂಜಿರ ಸಂಘಗಳಿಂದ ಸುಮಾರು 2100 ಲೀ.ಹಾಲು ಬರುತ್ತಿದ್ದು ಇದನ್ನು ಬಿಎಂಸಿಯಲ್ಲಿ ಸಂಗ್ರಹಿಸಿ ಒಕ್ಕೂಟಕ್ಕೆ ಕಳುಹಿಸಲಾಗುತ್ತಿದೆ. ಸದಸ್ಯರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಕೇಶವ ಗೌಡ ಅಲೆಕ್ಕಿ ಹೇಳಿದರು.
ಬಹುಮಾನ;
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಥಮ-ಸುರಭಿ ಕೆ.( 17,622 ಲೀ.), ದ್ವಿತೀಯ-ಕೆ.ಸಿ.ವರ್ಗೀಸ್ (10,907 ಲೀ.), ತೃತೀಯ-ಕುಶಾಲಪ್ಪ ಗೌಡ ಕುಡಾಲ (10,679 ಲೀ.) ಬಹುಮಾನ ಪಡೆದುಕೊಂಡರು.
ದ.ಕ.ಹಾಲು ಒಕ್ಕೂಟದ ಕಡಬ ಶಿಬಿರ ಕಚೇರಿ ವಿಸ್ತರಣಾಧಿಕಾರಿ ಆದಿತ್ಯ ಅವರು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿ ಹಾಲು ಉತ್ಪಾದಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು. ಜಾನುವಾರುಗಳಿಗೆ ವಿಮೆ ಹಾಗೂ ಔಷಧಿಗಳ ಕುರಿತಂತೆ ಅವರು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಅಣ್ಣಿ ನಾಯ್ಕ, ನಿರ್ದೇಶಕರಾದ ಕೆ.ಮಹಾವೀರ ಜೈನ್, ವರ್ಗೀಸ್ ಅಬ್ರಹಾಂ, ಆನಂದ ಶೆಟ್ಟಿ, ಶಾಂತಾರಾಮ, ಮೋಹನ್‌ದಾಸ್ ಬಿ., ಸಜಿ ಪಿ.ಜಿ., ವಿ.ಎಂ.ಮ್ಯಾಥ್ಯು, ಜೋಗಿ ಮುಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್‌ಕುಮಾರ್ ವರದಿ ವಾಚಿಸಿದರು. ರಾಧಾಕೃಷ್ಣ ಕೆ. ಸ್ವಾಗತಿಸಿದರು. ಶಾಂತಾರಾಮ ಪ್ರಾರ್ಥಿಸಿದರು. ಹಾಲು ಪರೀಕ್ಷಕ ತೇಜಸ್, ಸಹಾಯಕ ತನಿಯ ಸಹಕರಿಸಿದರು.










