ಜೆ.ಕೆ ಟೂರ್ಸ್ & ಟ್ರಾವೆಲ್ಸ್ ವತಿಯಿಂದ ದಸರಾ ವಿಶೇಷ ಯಾತ್ರಾ ಪ್ಯಾಕೇಜ್

0

ಪುತ್ತೂರು: ರೈಲ್ವೇ ನಿಲ್ದಾಣದ ಎದುರಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ಸ್ & ಟ್ರಾವೆಲ್ಸ್ ಏಜೆನ್ಸಿ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ವಿವಿಧ ಯಾತ್ರಾ ಪ್ಯಾಕೇಜ್‌ಗಳನ್ನು ಪ್ರಕಟಿಸಲಾಗಿದೆ. ಎಲ್ಲಾ ಪ್ಯಾಕೇಜ್‌ಗಳಿಗೆ ಸ್ಲೀಪರ್ ವಿತ್ ಎಸಿ ಸಿಟ್ಟಿಂಗ್ ಸೌಲಭ್ಯವುಳ್ಳ ವಾಹನ ವ್ಯವಸ್ಥೆ ಇರಲಿದೆ.

3 ದಿನಗಳ ತಿರುಪತಿ ಪ್ಯಾಕೇಜ್ ಟೂರ್‌ನಲ್ಲಿ ತಿರುಪತಿ, ಪದ್ಮಾವತಿ, ಕಾಳಹಸ್ತಿ, ವರಾಹಸ್ವಾಮಿ ದರ್ಶನ ಇರಲಿದೆ. ಮಂತ್ರಾಲಯ ಪ್ಯಾಕೇಜ್ ಪ್ರತಿ ತಿಂಗಳು ಇದ್ದು ಶೃಂಗೇರಿ ಶಂಕರಾಚಾರ್ಯ ಪ್ರತಿಮೆ ದರ್ಶನ, ಅಂಜನಾದ್ರಿ, ಹಂಪಿ, ಪಂಚಮುಖಿ ಆಂಜನೇಯ, ಮಂತ್ರಾಲಯ ದರ್ಶನ ಒಳಗೊಂಡಿದೆ.

2-10-2026 ರಂದು ಮೈಸೂರು ಪ್ಯಾಕೇಜ್ ಟೂರ್ (1½ ದಿನ) ಹಮ್ಮಿಕೊಳ್ಳಲಾಗಿದ್ದು ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಮೈಸೂರು ಅರಮನೆ, ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣ ರಂಗನಾಥ ದೇವಸ್ಥಾನ, ಕೆ.ಆರ್.ಎಸ್ ಡ್ಯಾಮ್, ವೃಂದಾವನ ಉದ್ಯಾನವನ ದರ್ಶನ ಇರಲಿದೆ.

7-10-2026 ರಂದು ಮಂತ್ರಾಲಯ ಪ್ಯಾಕೇಜ್ ಟೂರ್ (2½ ದಿನ) ಹಾಗೂ ದಿನಾಂಕ 16-10-2026 ಶುಕ್ರವಾರದಂದು ಒಂದು ದಿನದ ಪ್ಯಾಕೇಜ್‌ನಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಆನೆಕೆರೆ ಬಸದಿ ಕಾರ್ಕಳ, ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಮಲಶಿಲೆ, ಸುಪಾರ್ಶ್ವ ಗುಹೆ ಕಮಲಶಿಲೆ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಹೊಸ ಮಾರಿಗುಡಿ ಕಾಪು, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಮಂಗಳೂರು ದರ್ಶನ ಇರಲಿದೆ.

ಹೆಚ್ಚಿನ ಮಾಹಿತಿ ಹಾಗೂ ಬುಕ್ಕಿಂಗ್‌ಗಾಗಿ ಜೆ.ಕೆ ಟೂರ್ಸ್ ಮತ್ತು ಟ್ರಾವೆಲ್ಸ್ ಏಜೆನ್ಸಿ 9945277507, 9108550105 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here