ಮುಖ್ಯರಸ್ತೆಯ ಕೆ.ವಿ ಶೆಣೈ ಎಚ್.ಪಿ ಔಟ್‌ಲೆಟ್‌ನಲ್ಲಿ ಸುಸಜ್ಜಿತ ವ್ಹೀಲ್ ಅಲೈನ್‌ಮೆಂಟ್ ಸೆಂಟರ್ ಉದ್ಘಾಟನೆ

0

ಪುತ್ತೂರು; ಹಲವಾರು ವರ್ಷಗಳಿಂದ ಹೆಸರುವಾಸಿಯಾಗಿರುವ ಇಲ್ಲಿನ ಮುಖ್ಯರಸ್ತೆಯ, ಏಳ್ಮುಡಿ ಸಮೀಪ ಅರುಣಾ ಥಿಯೇಟರ್ ಬಳಿಯ ಕೆ.ವಿ ಶೆಣೈ ಎಚ್.ಪಿ ಔಟ್‌ಲೆಟ್‌ನಲ್ಲಿ ವ್ಹೀಲ್ ಅಲೈನ್‌ಮೆಂಟ್ ಸೆಂಟರ್ ಸೆ.26 ರಂದು ಉದ್ಘಾಟನೆಗೊಂಡಿತು.


ಗುಣಮಟ್ಟದ ಸೇವೆ, ಗ್ರಾಹಕರ ವಿಶ್ವಾಸದೊಂದಿಗೆ ವ್ಯವಹಾರ ವೃದ್ಧಿ-ಅರುಣ್ ಬನ್ಸಾಲ್:
ಮುಖ್ಯ ಅತಿಥಿ, ಮಂಗಳೂರು ಎಚ್‌ಪಿಸಿಎಲ್ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಬನ್ಸಾಲ್‌ರವರು ವೀಲ್ ಅಲೈನ್‌ಮೆಂಟ್ ಉಪಕರಣ ಉದ್ಘಾಟಿಸಿ ಮಾತನಾಡಿ, ಹಿಂದೂಸ್ತಾನ್ ಪೆಟ್ರೋಲಿಯಂ(ಎಚ್‌ಪಿಸಿಎಲ್) ಉದ್ಯಮವನ್ನು ಈ ಭಾಗದಲ್ಲಿ 1954ರಲ್ಲಿ ಆರಂಭಿಸಿದ್ದು ಇದೀಗ ಕೆ.ವಿಶ್ವಾಸ್ ಶೆಣೈ ಹಾಗೂ ವಿನೀತ್ ಶೆಣೈರವರು ಉತ್ತಮವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ ಮಾತ್ರವಲ್ಲ ತಮ್ಮ ಗುಣಮಟ್ಟದ ಸೇವೆಯೊಂದಿಗೆ ಗ್ರಾಹಕರ ವಿಶ್ವಾಸವನ್ನು ಗಳಿಸಿ ವ್ಯವಹಾರ ವೃದ್ಧಿಗೆ ಕಾರಣರಾಗಿದ್ದಾರೆ. ಯಾವುದೇ ಉದ್ಯಮವಾಗಲಿ, ಗ್ರಾಹಕರಿಗೆ ಏನು ಅಗತ್ಯತೆಗಳು ಬೇಕಾಗಿವೆ ಎಂದು ತಿಳಿದುಕೊಂಡು ನೀಡುವವರಾಗಬೇಕು. ಇದೀಗ ಈ ಸಂಸ್ಥೆಯು ನೂತನ ಉದ್ಯಮವನ್ನು ಆರಂಭಿಸಿದ್ದು ಈ ಉದ್ಯಮ ಎಲ್ಲರ ಜನಮನ್ನಣೆಯನ್ನು ಗಳಿಸಲಿ ಎಂದರು.


ಚಕ್ರಗಳನ್ನು ಸಮರ್ಪಕವಾಗಿ ಪರಿಶೀಲಿಸಿದಾಗ ಸ್ಮೂತ್ಲಿಯಾಗಿ ಕಾರ್ಯ-ಬಾಲಚಂದ್ರ ನಾಯಕ್:
ಪುತ್ತೂರು ಕಾರ್ ಮ್ಯಾಕ್ಸ್ ಎಂ.ಡಿ ಬಾಲಚಂದ್ರ ನಾಯಕ್‌ರವರು ವ್ಲೀಲ್ ಬ್ಯಾಲೆನ್ಸ್ ಉಪಕರಣ ಉದ್ಘಾಟಿಸಿ ಮಾತನಾಡಿ, ತನ್ನ ವರ್ಕ್‌ಶಾಪ್ ಟೊಯೋಟಾ ಕ್ವಾಲಿಸ್ ಮರ್ಸಿಡಿಸ್ ಬೆಂಝ್ ಹೊಂದಿದ್ದಾಗಿನಿಂದಲೂ ವಿಶ್ವಾಸ್ ಶೆಣೈರವರು ಸಹಕಾರ ನೀಡುತ್ತಾ ಬಂದಿದ್ದಾರೆ. ಪುತ್ತೂರಿನ ಈ ಭಾಗದಲ್ಲಿ ವ್ಲೀಲ್ ಅಲೈನ್‌ಮೆಂಟ್ ಗ್ರಾಹಕರಿಗೆ ಅಗತ್ಯವಾಗಿ ಬೇಕಾಗಿದ್ದು ಈಗ ಅದು ಈಡೇರಿದೆ. ಕಾರುಗಳ ಟಯರ್‌ಗಳು ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆಯೇ ಎಂದು ಪರೀಕ್ಷಿಸಲು ಇದು ಉತ್ತಮ ಸಾಧನವಾಗಿದೆ. ಕಾಲಕಾಲಕ್ಕೆ ಕಾರುಗಳ ಚಕ್ರಗಳನ್ನು ಸಮರ್ಪಕವಾಗಿ ಪರಿಶೀಲಿಸಿದಾಗ ಕಾರುಗಳು ಸ್ಮೂತ್ಲಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.


ವ್ಯವಹಾರದಲ್ಲಿ ಗ್ರಾಹಕರ ವಿಶ್ವಾಸ ಸಂಸ್ಥೆಯ ಹೆಗ್ಗಳಿಕೆ-ಇಶಿತಾ ಗಾರ್ಗ್:
ಗೌರವ ಅತಿಥಿ, ಎಚ್‌ಪಿಸಿಎಲ್ ಮಂಗಳೂರು ಇದರ ಸೇಲ್ಸ್ ವ್ಯವಸ್ಥಾಪಕಿ ಶ್ರೀಮತಿ ಇಶಿತಾ ಗಾರ್ಗ್‌ರವರು ಟೈರ್ ಚೇಂಜರ್ ಉಪಕರಣ ಉದ್ಘಾಟಿಸಿ ಮಾತನಾಡಿ, ಕೆ.ವಿ ಶೆಣೈ ಸಂಸ್ಥೆಯು ಮೂರು ಹಾಗೂ ನಾಲ್ಕನೇ ಪೀಳಿಗೆಯನ್ನು ಹೊಂದಿದ್ದು ತಮ್ಮ ವ್ಯವಹಾರವನ್ನು ಉತ್ತಮ ರೀತಿಯಲ್ಲಿ, ಗ್ರಾಹಕರ ವಿಶ್ವಾಸದೊಂದಿಗೆ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಈ ಸಂಸ್ಥೆಗೆ ಗ್ರಾಹಕರಿಗೆ ಏನು ಬೇಕು ತಿಳಿದುಕೊಂಡು ಕಾರ್ಯ ಪ್ರವೃತ್ತರಾಗುತ್ತಿರುವುದು ಸಂಸ್ಥೆಯ ವಿಶೇಷತೆ ಎಂದರು.


ಆಧುನೀಕರಣದೊಂದಿಗೆ ನೂತನ ಉದ್ಯಮ ಯಶಸ್ವಿಯಾಗಲಿ-ಕೆ.ರತ್ನಾಕರ್ ಶೆಣೈ:
ಕೆ.ವಿ ಶೆಣೈ & ಕಂಪೆನಿ ಸಂಸ್ಥಾಪಕ ಹಾಗೂ ಪುತ್ತೂರಿನ ರೋಟರಿ ಭೀಷ್ಮ ಕೆ.ರತ್ನಾಕರ್ ಶೆಣೈರವರು ನೈಟ್ರೋಜನ್ ವ್ಯವಸ್ಥೆಯ ಉಪಕರಣವನ್ನು ಉದ್ಘಾಟಿಸಿ ಮಾತನಾಡಿ, ಗೇರುಬೀಜಗಳ ಉತ್ಪನ್ನದೊಂದಿಗೆ ತಂದೆ ದಿ.ಕೆ.ವಿ ಶೆಣೈರವರು ಪ್ರಥಮವಾಗಿ ಉದ್ಯಮವನ್ನು ಆರಂಭಿಸಿರುವುದಾಗಿದೆ. ಬಳಿಕ 1954ರಲ್ಲಿ ಕೆ.ವಿ ಶೆಣೈ ಪೆಟ್ರೋಲ್ ಪಂಪಿಗೆ ಅಡಿಪಾಯ ಹಾಕಿದವರಾಗಿದ್ದು ಇದೀಗ ನಮ್ಮ ಈ ಸಂಸ್ಥೆಯನ್ನು ಮೂರನೇ, ನಾಲ್ಕನೇ ಪೀಳಿಗೆಯಲ್ಲಿ ಮಗ ಕೆ.ವಿಶ್ವಾಸ್ ಶೆಣೈ, ಮೊಮ್ಮಗ ವಿನೀತ್ ಶೆಣೈರವರ ನಾಯಕತ್ವದೊಂದಿಗೆ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದು ಗ್ರಾಹಕರ ಪ್ರೋತ್ಸಾಹದಿಂದ ವ್ಯವಹಾರ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇದೀಗ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವಾಸ್ ಹಾಗೂ ವಿನೀತ್ ಶೆಣೈರವರು ಶಿವಪ್ರಸಾದ್ ರೈರವರೊಂದಿಗೆ ಆಧುನೀಕರಣದೊಂದಿಗೆ ನೂತನ ಉದ್ಯಮವನ್ಬು ಆರಂಭಿಸಿದ್ದು ಈ ನೂತನ ಉದ್ಯಮ ಯಶಸ್ವಿಯಾಗಲಿ ಎಂದರು.


ಅಭಿನಂದನೆ:
ನೂತನ ಸಂಸ್ಥೆಯ ತಾಂತ್ರಿಕತೆ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡ ಮಧೂಸ್ ಗ್ಯಾರೇಜ್ ಬೆಂಗಳೂರು ಇದರ ವಿಕಾಸ್ ಹಾಗೂ ಸಂಸ್ಥೆಯ ಸಿವಿಲ್ ಕಾಂಟ್ರಾಕ್ಟರ್ ವಹಿಸಿಕೊಂಡ ಔರಿಕ್ ಸ್ಪೇಸ್ ಫೌಂಡೇಶನ್‌ನ ಸುಜಿತ್ ಬಾಳಿಗರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.


ಪುತ್ತೂರು ವರ್ತಕ ಸಂಘದ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ, ಪ್ರಶಾಂತಿ ಆಯುರ್ವೇದ ಸೆಂಟರ್‌ನ ಡಾ.ಶಶಿಧರ್ ಕಜೆ, ಉದ್ಯಮಿ ರೋಶನ್ ರೈ ಬನ್ನೂರು, ಕುಡ್ಗಿ ಪ್ರಭಾಕರ್ ಶೆಣೈ, ವಿ.ಆರ್ ಅಸೋಸಿಯೇಟ್ಸ್‌ನ ವಿಶಾಲ್ ಮೊಂತೇರೊ ಹಾಗೂ ಆಂಡ್ರ್ಯೂ ಡಾಯಸ್, ದರ್ಬೆ ಪಿ.ಸಿ ಪೈ ಪೆಟ್ರೋಲ್ ಪಂಪಿನ ಕೇಶವ ಪೈ ಸೇರಿದಂತೆ, ಕೆ.ವಿ ಶೆಣೈ ಪೆಟ್ರೋಲ್ ಪಂಪ್‌ನ ಕುಟುಂಭಿಕರು ಹಲವರು ಉಪಸ್ಥಿತರಿದ್ದರು. ಕೆ.ವಿ ಶೆಣೈ ಪೆಟ್ರೋಲ್ ಪಂಪ್ ಹಾಗೂ ವ್ಹೀಲ್ ಅಲೈನ್‌ಮೆಂಟ್ ಮಾಲಕ ಕೆ.ವಿಶ್ವಾಸ್ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಹೀಲ್ ಅಲೈನ್‌ಮೆಂಟ್ ಮಾಲಕ ವಿನೀತ್ ಶೆಣೈ ವಂದಿಸಿ, ಗ್ರಾಹಕರ ಸಹಕಾರ ಕೋರಿದರು. ವ್ಹೀಲ್ ಅಲೈನ್‌ಮೆಂಟ್ ಮಾಲಕ ವಿನೀತ್ ಶೆಣೈರವರ ತಾಯಿ ಶಾಂತಿ ಶೆಣೈರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕು.ತನ್ವಿ ಶೆಣೈ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ..
ಇಪ್ಪತ್ತು ವರುಷದ ಹಿಂದೆ ಕೆ.ವಿ ಶೆಣೈ ಪೆಟ್ರೋಲ್ ಪಂಪಿನ ಆವರಣದಲ್ಲಿ ಶಿವಾಸ್ ಟಯರ್ ಕೇರ್ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿ ಸಂಸ್ಥೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದ ಶಿವಾಸ್ ಟಯರ್ ಕೇರ್ ಮಾಲಕ ಸುರೇಶ್ಚಂದ್ರ ರೈರವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೀಗ ಅದೇ ಸಂಸ್ಥೆಯನ್ನು ಶಿವಪ್ರಸಾದ್ ರೈರವರು ಮುನ್ನೆಡೆಸುತ್ತಿದ್ದು ಮಾತ್ರವಲ್ಲ ನೂತನ ವ್ಹೀಲ್ ಅಲೈನ್‌ಮೆಂಟ್ ಸಂಸ್ಥೆಯನ್ನು ಕೂಡ ಶಿವಪ್ರಸಾದ್ ರೈರವರೇ ಮುನ್ನೆಡೆಸುತ್ತಿದ್ದಾರೆ.

ಅದೃಷ್ಟ ವ್ಯಕ್ತಿ..
ಸಂಸ್ಥೆಯು ದ್ವಿಚಕ್ರ ಹಾಗೂ ಚತುಷ್ಚಕ್ರ ಹೊಂದಿರುವ ವಾಹನಗಳ ಚಾಲಕ-ಮಾಲಕರು ಸಂಸ್ಥೆಯಲ್ಲಿ ಪವರ್ ಪೆಟ್ರೋಲ್ ಹಾಕಿಸಿಕೊಳ್ಳುವವರಿಗೆ ಅದೃಷ್ಟ ವ್ಯಕ್ತಿ ಕೂಪನ್ ನೀಡಲಾಗಿತ್ತು. ಅದರಂತೆ ಅತಿಥಿ ಗಣ್ಯರು ದ್ವಿಚಕ್ರ ವಾಹನದಲ್ಲಿ ಯಶೋಧ ಹಾಗೂ ಚತುಷ್ಚಕ್ರ ವಾಹನದಲ್ಲಿ ದೀಪಕ್ ಬೊಳ್ವಾರುರವರು ವಿಜೇತರಾಗಿದ್ದಾರೆ.

ಪ್ರಥಮ ಗ್ರಾಹಕ..
ಈ ಸಂದರ್ಭದಲ್ಲಿ ಪುತ್ತೂರಿನ ಪ್ರಸಿದ್ಧ ಕನ್ಸ್ಟ್ರಕ್ಷನ್ ಸಂಸ್ಥೆ ಎನಿಸಿದ ನಾಯರ್ ಕನ್ಸ್ಟ್ರಕ್ಷನ್ ಮಾಲಕ ಸೂರಜ್ ನಾಯರ್ ಸಾಮೆತ್ತಡ್ಕರವರು ಪ್ರಥಮ ಗ್ರಾಹಕರಾಗಿದ್ದು ಸಂಸ್ಥೆಯು ಸೂರಜ್ ನಾಯರ್ ರವರಿಗೆ ಕಿರುಕಾಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here