







ಪುತ್ತೂರು: ಕೈಗಾರಿಕಾ ಸಂಘ ಪುತ್ತೂರು ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.26ರಂದು ಮುಕ್ರಂಪಾಡಿ ಕೈಗಾರಿಕ ಪ್ರದೇಶದಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೇಶವ ಅಮೈ ಮಾತನಾಡಿ, 1986-87 ಪ್ರಾರಂಭಗೊಂಡ ಕೈಗಾರಿಕಾ ಸಂಘವು 40ರ ಸಂಭ್ರಮದಲ್ಲಿದೆ. ಸದಸ್ಯರಿಗಾಗಿ ಸಂಘ ಕಾರ್ಯನಿರ್ವಹಿಸುತ್ತಿದ್ದು ಸದಸ್ಯರು ಸಕ್ರಿಯವಾಗಿ ಸಂಘದ ಜೊತೆಗೆ ಕೈ ಜೋಡಿಸಬೇಕು. ಸಂಘದ ನೋಂದಾವಣಿ ಸಂಘದ ಕೆಲಸ ಕಾರ್ಯಗಳಿಗೆ ಮಂಗಳೂರು, ಬೆಂಗಳೂರುಗಳಿಗೆ ಸಂಚರಿಸಿದ ಸಂಘದ ಹಣ ಖರ್ಚುಮಾಡಿಲ್ಲ. ಎಲ್ಲವನ್ನೂ ನಾವೇ ಭರಿಸಿದ್ದೇವೆ. ಇದೀಗ ಸಂಘದಲ್ಲಿ ಹಣಕಾಸಿಮ ಕೊರತೆಯಿದ್ದು ಪ್ರತಿಯೊಬ್ಬ ಸದಸ್ಯರೂ ಸಹಕರಿಸಿದಬೇಕು. ಸಂಘಕ್ಕೆ ಕೋಟ್ಯಾಂತರ ಬೆಲೆಬಾಳವ ಆಸ್ತಿಯಿದ್ದು ಅದನ್ನು ವಾನಿಜ್ಯವಾಗಿ ಮಾರ್ಪಾಡು ಮಾಡಲಾಗುವುದು. ಆಗ ಕೋಟ್ಯಾಂತರ ಆಸ್ತಿಯು ಸಂಘಕ್ಕೆ ದೊರೆಯಲಿದೆ. ಹೊಸ ಕೈಗಾರಿಕಾ ವಲಯ ನಿರ್ಮಿಸಿ, ಅದನ್ನು ಮುಂದಿನ ಪೀಳಗೆಗೆ ವರ್ಗಾಯಿಸುವಲ್ಲಿ ಸದಸ್ಯರು ಎಲ್ಲಾ ರೀತಿಯಲ್ಲಿ ಸಹಕರಿಸುವಂತೆ ಅವರು ವಿನಂತಿಸಿದರು.
ನಿಕಟಪೂರ್ವ ಅಧ್ಯಕ್ಷ ಶಿವಶಂಕರ ಬೋನಂತಾಯ, ಕೇಶವ ಅಮೈ ಅವರ ನೇತೃತ್ವದಲ್ಲಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಈ ಅವಧಿಯಲ್ಲಿ ನಡೆದಿದ್ದು ಸಂಘದ ಅಧ್ಯಕ್ಷ ಕೇಶವ ಅಮೈ ಅವರು ಕೈಗಾರಿಕ ಸಂಘದ ಅಸ್ಥಿಯಾಗಿದ್ದಾರೆ ಎಂದರು.



ನೂತನ ಪದಾಧಿಕಾರಿಗಳ ಆಯ್ಕೆ:
ಮಹಾಸಭೆಯಲ್ಲಿ 2026-27 ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ವಿಶ್ವಪ್ರಸಾದ್ ಸೇಡಿಯಾಪು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.ಸಂಘದ ಸಮಗ್ರ ಉಪವಿಧಿಗಳ ತಿದ್ದುಪಡಿಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ, ಅನುಮತಿ ಪಡೆದುಕೊಳ್ಳಲಾಯಿತು. ಸದಸ್ಯರಾದ ಮೋಹನ್ ಬೊಳ್ಳಾಡಿ, ಪದ್ಮನಾಭ ಶೆಟ್ಟಿ, ಸೂರ್ಯನಾಥ ಆಳ್ವ, ಹರೀಶ್ ಪುತ್ತೂರಾಯ ಮೊದಲಾದವರು ಅಭಿಪ್ರಾಯಗಳನ್ನು ತಿಳಿಸಿದರು.
ಸಂಘದ ಸ್ಥಾಪಕ ಅಧ್ಯಕ್ಷ ಡಾ.ಪಿಕೆಎಸ್ ಭಟ್, ಕಾರ್ಯಕಾರಿ ಸಮಿತಿ ಸದಸ್ಯ ಪ್ರಸನ್ನ ಕುಮಾರ್ ರೈ, ಸಿಡ್ಕೋ ಸೊಸೈಟಿ ಅಧ್ಯಕ್ಷ ಟಿ.ವಿ ರವೀಂದ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ಆರ್ಕೆಯ ದೀಪಕ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಮಹಮ್ಮದ್ ಸಾದಿಕ್ ಕೆ.ಪಿ ಪ್ರಸ್ತಾವಣೆಯೊಂದಿಗೆ ಸ್ವಾಗತಿಸಿದರು. ಖಜಾಂಚಿ ಲಿಯೋ ಮಾರ್ಟಿಸ್ ಲೆಕ್ಕಪತ್ರ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಸುರೇಖಾ ತಿಳುವಳಿಕೆ ಪತ್ರ ಓದಿದರು. ರವಿರಾಜ್ ಭಟ್ ಗತ ಸಭೆಯ ನಡಾವಳಿಗಳನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ವಾರ್ಷಿಕ ವರದಿ ವಾಚಿಸಿ, ವಂದಿಸಿದರು.
ಮುಕ್ರಂಪಾಡಿಯಲ್ಲಿರುವ ಕೈಗಾರಿಕಾ ವಲಯದಲ್ಲಿ 31 ನಿವೇಶನಗಳಿವೆ. ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ರಸ್ತೆ ಇದ್ದರೂ ಗುರತು ಇಲ್ಲ. ನೀರಿನ ಸಮರ್ಪಕ ಪೂರೈಕೆಯಿಲ್ಲ. ವಿದ್ಯುತ್ ಸರಬರಾಜು ಸಮಸ್ಯೆ, ಲೋ ಓಲ್ಟೇಜ್ ಸಮಸ್ಯೆಯಿದೆ. ವಿದ್ಯುತ್ ಟಿಸಿಯು ರಸ್ತೆ ಮಧ್ಯೆಯಿದೆ. ಈಗಿರುವ ಕೈಗಾರಿಕಾ ವಲಯ ಸಮರ್ಪಕವಾಗಿಲ್ಲ. ಹೀಗಾಗಿ ಈ ವಲಯದ ಅಭಿವೃದ್ಧೀಯಾಗಬೇಕು. ಕೈಗಾರಿಕೆ ಪ್ರಾರಂಭಿಸಲು ಬಹಳಷ್ಟು ಅರ್ಜಿಗಳಿವೆ. ಹೊಸ ಕೈಗಾರಿಕಾ ವಲಯ ಮಂಜೂರಾಗಬೇಕು. 50-100 ಎಕರೆ ಸರಕಾರಿ ಜಾಗ ಗುರುತಿಸಬೇಕು.
-ಕೇಶವ ಅಮೈ, ಅಧ್ಯಕ್ಷರು ಕೈಗಾರಿಕಾ ಸಂಘ










