







ಪುತ್ತೂರು: ದೀಪಮ್ ಸಂಸ್ಥೆ ಮಂಗಳೂರು ಇವರು ಪ್ರಸ್ತುತ ಪಡಿಸುವ “ವೈಭವಂ ಫ್ಯಾಷನ್ ಮೇಳ” ಸೆ. 26 ರಂದು ಪುತ್ತೂರು ಟೌನ್ ಬ್ಯಾಂಕ್ ಹಾಲ್ನಲ್ಲಿ ಉದ್ಘಾಟನೆಗೊಂಡಿದ್ದು, ಸೆ. 28 ರಂದು ಕೊನೆಯ ದಿನವಾಗಿರುತ್ತದೆ.



ಬೆಳಿಗ್ಗೆ 9.30 ರಿಂದ ರಾತ್ರಿ 8 ರತನಕ ನಡೆಯಲಿರುವ ವೈಭವಂ ಫ್ಯಾಶನ್ ಮೇಳದಲ್ಲಿ ವಿವಿಧ ವಿನ್ಯಾಸದ ಸೀರೆಗಳು, ಚೂಡಿದಾರ್ ಸೆಟ್ಗಳು, 1 ಗ್ರಾಂ, ಚಿನ್ನದ ಅಭರಣಗಳು, ಬ್ಯಾಗ್ಗಳು, , ಅಲಂಕಾರಿಕ ವಸ್ತಗಳು, ಆಯುರ್ವೇದ ಉತ್ಪನ್ನಗಳು, ದೇಶಿ ತಳಿ ತರಕಾರಿ ಬೀಜಗಳು, ಚೆನ್ನಪಟ್ಟಣದ ಅಟಿಕೆಗಳು, ಪಂಚಲೋಹದ ಅಭರಣಗಳು, ಪುರುಷರ, ಮಕ್ಕಳ ಉಡುಪುಗಳು ಮತ್ತು ಇತರ ವಸ್ತುಗಳು ಲಭ್ಯವಿದೆ. ಜೊತೆಗೆ ಸೋಲಾರ್ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.




ಗ್ರಾಹಕರಿಗೆ ಲಕ್ಕಿ ಡ್ರಾ ಮುಖಾಂತರ ವಿಶೇಷ ಬಹುಮಾನ, ರೂ 2000, ರೂ. 1000, ರೂ 500, ಆಭರಣ ಹಾಗೂ ವಸ್ತ್ರ ಗೆಲ್ಲುವ ಅವಕಾಶ ಇದೆ. ಅಲ್ಲದೇ ಮಕ್ಕಳ ಮತ್ತು ಪುರುಷರ ಉಡುಪುಗಳ ಮೇಲೆ ಶೇ 40 ರಿಯಾಯಿತಿ ಇದೆ. ಮೂರು ದಿನಗಳ ಕಾಲ ನಡೆಯುವ ಫ್ಯಾಷನ್ ಮೇಳದಲ್ಲಿ ಹಳೆಯ ಕಾಂಚಿಪುರಂ ಸೀರೆಗಳನ್ನು ಉತ್ತಮ ಬೆಲೆಗೆ ಖರೀದಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರಾದ ಸುಧಾ ಪ್ರಹ್ಲಾದ್ ಸುವರ್ಣ ತಿಳಿಸಿದ್ದಾರೆ










