







ಪುತ್ತೂರು; ಇತ್ತೀಚೆಗೆ ನಿಧನರಾದ ಹಿರಿಯ ಬಿಜೆಪಿ ಮುಖಂಡ ಆರ್ಯಾಪು ಗ್ರಾಮದ ಮರಿಕೆ ದೇವಣ್ಣ ನಾಯಕ್ ಅವರ ಶ್ರದ್ದಾಂಜಲಿ ಸಭೆಯು ಸೆ.26ರಂದು ಅವರ ಸ್ವಗೃಹ ಮರಿಕೆಯಲ್ಲಿ ನಡೆಯಿತು.


ನುಡಿ ನಮನ ಸಲ್ಲಿಸಿದ ನಿವೃತ್ತ ಪ್ರಾಧ್ಯಾಪಕ ಎ.ಪಿ ರಾಧಾಕೃಷ್ಣ ಮಾತನಾಡಿ, ಅದ್ಬುತ ಜ್ಞಾನಹೊಂದಿದ್ದ ದೇವಣ್ಣ ನಾಯಕ್ ಅವರಲ್ಲಿ ಶ್ರಮದ ಜೊತೆಗೆ ಬೌಧಿಕ ಕಾಯಕ ಅಸ್ಮಿತೆಯಿದ್ದ ವ್ಯಕ್ತಿಯಾಗಿದ್ದರು. ಅವರು ಮಾಡದ ಕೆಲಸಗಳಿಲ್ಲ. ನನ್ನ ತಂದೆಯ ಕೃಷಿ ಕೆಲಸಗಳಿಗೆ ಬಲಗೈಯಾಗಿದ್ದ ಅವರು ತಂದೆಯ ಕನಸುಗಳನ್ನು ನನಸು ಮಾಡುವಲ್ಲಿ ಪ್ರಮುಖರಾಗಿದ್ದರು. ಕಲಾ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಯಕ್ಷಗಾನದಲ್ಲಿ ಭಾಗವತರಾಗಿ, ಅರ್ಥದಾರಿಯಾಗಿ ತಾಳಮದ್ದಳೆ ಕೂಟವನ್ನು ಕಟ್ಟಿಬೆಳೆಸಿದ ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದರು.



ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು ಮಾತನಾಡಿ, ಬಹಳ ಕಾಲದ ಒಡನಾಡಿಯಾಗಿದ್ದ ದೇವಣ್ಣ ನಾಯಕ್ ಅವರೊಂದಿಗೆ ರಾಜಕೀಯ ರಹಿತವಾದ ಬಂದುತ್ವ ನಮ್ಮದು. ಯಾರಿಗೂ ಅನ್ಯಾಯ ಮಾಡಿದವರಲ್ಲ, ಊರಿನವರಿಗೆ ಬಹಳಷ್ಟು ಉಪಕಾರಿಯಾಗಿದ್ದವರು. ಸಂಟ್ಯಾರು ವಿನಾಯಕ ಭಜನಾ ಮಂದಿರಕ್ಕೆ ಅನನ್ಯ ಕೊಡುಗೆ ನೀಡಿದವರು ಎಂದರು.
ಕೃಷಿಕ ತಿಮ್ಮಪ್ಪ ಗೌಡ ಮಾತನಾಡಿ, ಕೃಷಿ, ಕಲೆ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ದೇವಣ್ಣ ನಾಯಕ್ ಪೌರಾಣಿಕ ಕಥೆಗಳಲ್ಲಿ ಬಹಳಷ್ಟು ಅನುಭವಿಯಾಗಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದವರು ಎಂದರು.

ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ದೇವಣ್ಣ ನಾಯಕ್ ಅವರ ಪರಿಚಯವಿಲ್ಲದವರಿಲ್ಲ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಹಕಾರಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅವರು ವಾಸ್ತು ತಜ್ಞರಾಗಿ, ಅಂತರ್ಜಲ ಪರಿಶೋಧಕರಾಗಿ ಉಚಿತ ಸೇವೆಗಳನ್ನು ನೀಡುತ್ತಿದ್ದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲದ ನಿಕಟಪೂರ್ವ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಸೀತಾರಾಮ ಕೇವಳ, ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ವಾಗ್ಲೆ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಣೇಶ್ ರೈ ಮೂಲೆ, ಉಮೇಶ್ ವಾಗ್ಲೆ, ಎ.ಪಿ ಸತೀಶ್, ರಾಮಣ್ಣ ಗೌಡ ಪರನೀರು, ಚೆನ್ನಪ್ಪ ಗೌಡ ಪರನೀರು, ರಾಕೇಶ್ ಗೌಡ ಪರನೀರು, ಕುಶಾಲಪ್ಪ ಗೌಡ ಬಳಕ್ಕ, ರವಿಕಿರಣ್ ಮಯ್ಯ ಬಲ್ಲೇರಿ, ಶಶಿಧರ ಗೌಡ ಮರಿಕೆ, ರಾಕೇಶ್ ಕರ್ಕೇರಾ ಮರಿಕೆ, ವಿಶ್ವನಾಥ ಗೌಡ ಸಂಟ್ಯಾರ್, ಮಹೇಶ್ ಗೌಡ ಮರಿಕೆ, ಬಾಬು ಮರಿಕೆ, ರಾಧಾಕೃಷ್ಣ ರಾವ್ ಸುಂದರವನ, ಗಿರೀಶ್ ರೈ ಮೂಲೆ ಸಹಿತ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










