ಎಸ್‌ಕೆಎಸ್‌ಎಸ್‌ಎಫ್ ತಿಂಗಳಾಡಿ ಶಾಖೆಯ ಅಧ್ಯಕ್ಷರಾಗಿ ಹಮೀದ್ ದರ್ಬೆ, ಪ್ರ.ಕಾರ್ಯದರ್ಶಿಯಾಗಿ ರಝಾಕ್ ಸೊರಕೆ

0

ಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ತಿಂಗಳಾಡಿ ಶಾಖೆಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ದರ್ಬೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸೊರಕೆ, ಕೋಶಾಧಿಕಾರಿಯಾಗಿ ಅಬ್ದುಲ್ ಸಮದ್ ಬಿ.ಎಂ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಎ ಅಂಙತ್ತಡ್ಕ ಆಯ್ಕೆಯಾಗಿದ್ದಾರೆ. ತಿಂಗಳಾಡಿ ಜಿಸ್ತಿಯಾ ಮದರಸ ಸಭಾಂಗಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತಾಜುದ್ದೀನ್ ರಹ್ಮಾನಿ ಹಾಗೂ ಕುಂಬ್ರ ವಲಯ ಕಾರ್ಯದರ್ಶಿ ಸಿದ್ದಿಕ್ ಸುಲ್ತಾನ್ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಇಬ್ರಾಹಿಂ ಮುಸ್ಲಿಯಾರ್ ಟಿ, ಅಬ್ದುಲ್ ಖಾಸಿಮ್ ಹಸನವಿ ಓಲೆಮುಂಡೋವು, ಅಬ್ದುಲ್ ಜಬ್ಬಾರ್ ಅಂಙತಡ್ಕ, ಜೊತೆ ಕಾರ್ಯದರ್ಶಿಗಳಾಗಿ ಟಿ ರಾಝೀಕ್ ತಿಂಗಳಾಡಿ, ಇರ್ಷಾದ್ ಅಂಙತ್ತಡ್ಕ, ಮಹಮ್ಮದ್ ಅಮ್ಜದ್ ದರ್ಬೆ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಬ್ರಾಹಿಂ ಹಾಜಿ ದರ್ಬೆ, ಹಮೀದ್ ಟಿ.ಎಂ, ಅಹಮ್ಮದ್ ಮಿಝಾದ್, ಮುಹಮ್ಮದ್ ಶೇರಜ್, ಅಫ್ರಾಝ್ ಅಹ್ಮದ್ ಆಯ್ಕೆಯಾದರು. ಕೌನ್ಸಿಲರ್‌ಗಳಾಗಿ ಇಬ್ರಾಹಿಂ ಹಾಜಿ ದರ್ಬೆ, ಇಸ್ಮಾಯಿಲ್ ಯಮಾನಿ, ಇಬ್ರಾಹಿಂ ಮುಸ್ಲಿಯಾರ್, ಫಾರೂಕ್ ಸಅದಿ, ಸಮೀರ್ ಓಲೆಮುಂಡೋವು ಆಯ್ಕೆಯಾದರು.

ಶಾಖೆಯ ಅಧ್ಯಕ್ಷರಾಗಿದ್ದ ಅಬ್ದುಲ್ ಸಮದ್ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ರಹ್ಮಾನಿ ದುವಾ ನೆರವೇರಿಸಿದರು. ಕುಂಬ್ರ ವಲಯ ಅಧ್ಯಕ್ಷ ಮನ್ಸೂರ್ ಅಸ್ಲಮಿ ಉದ್ಘಾಟಿಸಿದರು. ಅಬ್ದುಲ್ ರಝಾಕ್ ಸೊರಕೆ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ಅಬ್ದುಲ್ ಬಾಸಿತ್ ಮತ್ತಿತರರು ಉಪಸ್ಥಿತರಿದ್ದರು. ಫಾರೂಕ್ ಸಅದಿ ವಂದಿಸಿದರು.

LEAVE A REPLY

Please enter your comment!
Please enter your name here